ಪಾದರಕ್ಷೆಗಳ ಹೋಲ್ ಸೇಲ್ ಮಳಿಗೆ ಹೊಂದಿರುವಂತ ʼನ್ಯೂ ಆಕಾಶ್ ಫೂಟ್ ವೇರ್ʼ ನವೀಕರಣಗೊಂಡು ಶುಭಾರಂಭ

0

ಶುಭಾರಂಭದ ಸಲುವಾಗಿ ಪ್ರತಿ ಖರೀದಿಗೂ 10% ವಿಶೇಷ ರಿಯಾಯಿತಿ…!!!

ಪಾರದರ್ಶಕ ವ್ಯವಹಾರ ಮೂಲಕ ಎಲ್ಲಾ ವರ್ಗದ ಗ್ರಾಹಕರ ವಿಶ್ವಾಸಾರ್ಹ ಸಂಸ್ಥೆ ” ನ್ಯೂ ಆಕಾಶ್”

ಪುತ್ತೂರು : ಇಪ್ಪತ್ತು ವರ್ಷಗಳ ಅನುಭವಗಳೊಂದಿಗೆ , ಎಂ.ಟಿ ರಸ್ತೆಯ ಕಟ್ಲೇರಿ ಮಾಲ್ ಸಂಕೀರ್ಣದಲ್ಲಿ ಹೋಲ್ ಸೇಲ್ ಮಳಿಗೆ ಹೊಂದಿ , ಕಳೆದ ಹತ್ತು ವರ್ಷಗಳಿಂದ ಇಲ್ಲಿನ ದರ್ಬೆ ಶುಭ ಬುಕ್ ಹೌಸ್ ಮುಂಭಾಗದ ಮೊಯಿದ್ದೀನ್ ಸಂಕೀರ್ಣದಲ್ಲೂ ಬ್ರಾಂಡೆಡ್ ಪಾದರಕ್ಷೆಗಳ ಮಳಿಗೆ ತೆರೆದು, ಎಲ್ಲಾ ವರ್ಗದ ಜನರ ಪ್ರೀತಿ , ವಿಶ್ವಾಸ ಗಳಿಸಿಕೊಂಡಿರುವ ನ್ಯೂ ಆಕಾಶ್ ಫೂಟ್ ವೇರ್ ಸೆ.13 ರಂದು ನವೀಕೃತಗೊಂಡು ಮತ್ತೆ ಶುಭಾರಂಭಗೊಂಡು ತನ್ನ ಮೆಚ್ಚಿನ ಗ್ರಾಹಕರ ಸೇವೆಗೆ ಸಿದ್ಧಗೊಂಡಿದೆ.


ನವೀಕರಣಗೊಂಡಿರುವ ಮಳಿಗೆಯನ್ನು ಮಾಲೀಕರ ತಾಯಿ ಜೈನಾಬಿ ಹಾಜುಮ ಉದ್ಘಾಟಿಸಿ, ಹಾರೈಸಿದರು. ಮಂಗಳೂರು ಫರ್ನಿಚರ್ಸ್ ಮಾಲೀಕ ಇಸ್ಮಾಯಿಲ್ , ಸುದರ್ಶನ್ ಎಂಟರ್ಪ್ರೈಸಸ್ ನ
ಮನೋಜ್ ಟಿ ವಿ ಹಾಗೂ ಅನುಪ್ ಟಿ ವಿ , ಚಪ್ಪಲ್ ಬಜಾರ್ ಮಾಲೀಕ ರಫೀಕ್ , ಮ್ಯೂಸಿಕ್ ವರ್ಲ್ಡ್ ಮಾಲೀಕ ಚೇತನ್ , ಎಸ್.ಎಸ್. ಸ್ಕೇಲ್ ಬಜಾರ್ ಮಾಲೀಕ ಸಮೀರ್ ಪುತ್ತೂರ್ ಆನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಜಾದ್, ರಾಘವೇಂದ್ರ ಫ್ರೇಂ ವರ್ಕ್ಸ್ ಮಾಲೀಕ ಅಣ್ಣು ಪೂಜಾರಿ, ಮಹಾಲಿಂಗೇಶ್ವರ ಎಲೆಕ್ಟ್ರಾನಿಕ್ ಮಾಲೀಕ ಸಂದೀಪ್ ರೈ ,
ಸಿರಾತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಸುರಯ್ಯ ,ಪ್ರಸನ್ನ ಶೆಟ್ಟಿ ಸಿಝ್ಲರ್ , ಸಂಕೀರ್ಣದ ಮಾಲೀಕರಾದ ಅಬ್ದುಲ್ ಲತೀಫ್ ದರ್ಬೆ ಹಾಗೂ ಬಶೀರ್ ದರ್ಬೆ ಸಹಿತ ಹಲವರು ಅತಿಥಿಗಳು ಮಳಿಗೆಗೆ ಭೇಟಿ ನೀಡಿ , ಶ್ರೇಯೊಭಿವೃದ್ಧಿಗೆ ಹಾರೈಸಿದರು. ಸಂಸ್ಥೆ ಮಾಲೀಕರು ಹಾಗೂ ಸಿಬ್ಬಂದಿಗಳು ಅತಿಥಿಗಳನ್ನು ಸ್ವಾಗತಿಸಿ ,ಸತ್ಕರಿಸಿದರು.

ಬಳಿಕ ಮಾತನಾಡಿ , ನಮ್ಮಲ್ಲಿ ಪ್ಯಾರಗಾನ್ , ಬಾಟ , ಕ್ರಾಕ್ಸ್ , ಜೋಗರ್ , ವಿಕೆಸಿ ಮತ್ತು ಲ್ಯಾನ್ಸರ್ ಹಾಗೂ ಸ್ಪಾರ್ಕ್ ಈ ಮೊದಲಾದ ಕಂಪೆನಿಯ ವಿನೂತನ ರೀತಿಯ ಪಾದರಕ್ಷೆಗಳು ಹಾಗೂ ಶೂಗಳು ಕೂಡ 10% ರಿಯಾಯಿತಿಯೊಂದಿಗೆ ವರುಷದ ಎಲ್ಲಾ ಸಮಯದಲ್ಲೂ ಲಭ್ಯವಿದ್ದು , ಸಹಕಾರ ನೀಡುವಂತೆ ಯಾಚಿಸಿದರು.

LEAVE A REPLY

Please enter your comment!
Please enter your name here