ಸೆ.15: ಕಾವು ತುಡರ್ ಯುವಕ ಮಂಡಲದಿಂದ ಕಣ್ಣಿನ ಉಚಿತ ತಪಾಸಣಾ ಶಿಬಿರ

0

ಕಾವು: ಭಾರತ ಸರ್ಕಾರದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಇವರ ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರವು ಸೆ.15ರಂದು ಬೆಳಿಗ್ಗೆ ಗಂಟೆ 9.30 ರಿಂದ ಸಂಜೆ 3.00ರ ತನಕ ನನ್ಯ ಜನಮಂಗಳ ಸಭಾಭವನದಲ್ಲಿ ನಡೆಯಲಿದೆ.

ಶಿಬಿರದ ವಿಶೇಷತೆ :
ಶಿಬಿರದಲ್ಲಿ ಕಂಪ್ಯೂಟರೀಕೃತ ಕಣ್ಣಿನ ಉಚಿತ ತಪಾಸಣೆ ನಡೆಸಿ 5 ರಿಂದ 15 ವಯಸ್ಸಿನವರೆಗೆ ಕಣ್ಣಿನ ತೊಂದರೆ ಇರುವ ಮಕ್ಕಳಿಗೆ ಶಿಬಿರದ ಪ್ರಯುಕ್ತ ಉಚಿತವಾಗಿ ಕನ್ನಡಕವನ್ನು ವಿತರಿಸಲಾಗುವುದು.
ಶಿಬಿರದಲ್ಲಿ ಸಮೀಪ ದೃಷ್ಟಿ (Near Vision) ತೊಂದರೆಯವರಿಗೆ ಉಚಿತ ಕನ್ನಡಕವನ್ನು ವಿತರಿಸಲಾಗುವುದು. 15 ವಯಸ್ಸಿಗಿಂತ ಮೇಲ್ಪಟ್ಟು ದೂರದೃಷ್ಟಿ ಮತ್ತು ಸಮೀಪ ದೃಷ್ಟಿ ತೊಂದರೆ ಇರುವ ಅಗತ್ಯವುಳ್ಳವರಿಗೆ ಕನ್ನಡಕವನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುವುದು. ಶಿಬಿರದಲ್ಲಿ ಅಗತ್ಯವುಳ್ಳವರಿಗೆ ಕಣ್ಣಿನ ಪೊರೆ ಚಿಕಿತ್ಸೆಯ ಬಗ್ಗೆ ಮತ್ತು ನೇತ್ರದಾನದ ಬಗ್ಗೆ ಮಾಹಿತಿ ನೀಡಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಯುವಕ ಮಂಡಲದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ನನ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here