ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ‌ ಓಜಾಲ ಶಾಲೆಗೆ ಸಮಗ್ರ ಪ್ರಶಸ್ತಿ

0

ವಿಟ್ಲ: ಕಂಬಳ ಬೆಟ್ಟು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಓಜಾಲ ಹಿ.ಪ್ರಾ ಶಾಲಾ ಕಿರಿಯ ಮತ್ತು ಹಿರಿಯ ಎರಡು ವಿಭಾಗದಲ್ಲೂ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಕಿರಿಯರ ವಿಭಾಗದ ಕನ್ನಡ ಕಂಠಪಾಠದಲ್ಲಿ ಲಿಖಿತ ಪ್ರಥಮ, ಆಶುಭಾಷಣದಲ್ಲಿ ತನುಶ್ರೀ ಪ್ರಥಮ, ಅಭಿನಯ ಗೀತೆಯಲ್ಲಿ ಲಿಖಿತ ಕೆ ಪ್ರಥಮ, ಇಂಗ್ಲಿಷ್ ಕಂಠಪಾಠದಲ್ಲಿ ಕೆ ವಂದನ್ ಕುಮಾರ್ ದ್ವಿತೀಯ, ಕಥೆ ಹೇಳುವುದರಲ್ಲಿ ನಿಶಿಕಾ ದ್ವಿತೀಯ, ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಶೃತನ್ ತೃತೀಯ, ಅರೇಬಿಕ್ ಧಾರ್ಮಿಕ ಪಠಣದಲ್ಲಿ ಎಂ ಸಾಹಿಲ್ ತೃತೀಯ, ಭಕ್ತಿ ಗೀತೆಯಲ್ಲಿ ಮನಿತ್ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.


ಹಿರಿಯರ ವಿಭಾಗದಲ್ಲಿ ಪ್ರಬಂಧ ರಚನೆ ಧನ್ವಿತ್ ಪ್ರಥಮ, ಆಶುಭಾಷಣದಲ್ಲಿ ಹರಿಷ್ಮಿತಾ ಎಸ್ ರೈ ಪ್ರಥಮ, ಹಿಂದಿ ಕಂಠಪಾಠದಲ್ಲಿ ಆಕಾಶ ಎನ್ ದ್ವಿತೀಯ, ದೇಶಭಕ್ತಿ ಗೀತೆ ಯಲ್ಲಿ ಗ್ರೀಷ್ಮ ಆರ್ ದ್ವಿತೀಯ, ಚಿತ್ರಕಲೆಯಲ್ಲಿ ಹಂಶಿಕ ಪಿ ದ್ವಿತೀಯ, ಕವನ ವಾಚನದಲ್ಲಿ ಫಾತಿಮತ್ ಮನ್ಸೂರ ದ್ವಿತೀಯ, ಮಿಮಿಕ್ರಿಯಲ್ಲಿ ಪ್ರಥಮ್ ದ್ವಿತೀಯ, ಕನ್ನಡ ಕಂಠಪಾಠದಲ್ಲಿ ಗನ್ಯ ತೃತೀಯ, ಇಂಗ್ಲಿಷ್ ಕಂಠಪಾಠದಲ್ಲಿ ಧನ್ವಿತ್ ತೃತೀಯ, ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಲಿತಿಕಾ ಪಿ ತೃತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ಕ್ಲಸ್ಟರ್ ಹಂತದಲ್ಲಿ ಪ್ರಥಮ ಬಂದ ಐವರು ವಿದ್ಯಾರ್ಥಿಗಳು ತಾಲೂಕು ಹಂತಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕರಾದ ಸಂಜೀವ ಮಿತ್ತಳಿಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here