ಕಡಬ: ಜೆಸಿಐ ಕಡಬ ಕದಂಬ, ಜೆ ಸಿ ಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಸಹಯೋಗದೊಂದಿಗೆ ಜೆಸಿಐ ಸಪ್ತಾಹದ ಅಂಗವಾಗಿ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಪರಿಸರ ಸಂಘದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ವೀಕ್ಷಣಾ ಕಾರ್ಯಕ್ರಮ ನಿವೃತ್ತ ಎ.ಸಿ.ಎಫ್ ಸದಾಶಿವ ಭಟ್ ಇವರ ಮನೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸರಸ್ವತೀ ಸಮೂಹ ಸಂಸ್ಥೆಯ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ ದೀಪ ಬೆಳಗಿ ಉದ್ಘಾಟಿಸಿ, ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಕಾಳಜಿಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಸುತ್ತ-ಮುತ್ತ ಅನೇಕ ಔಷಧೀಯ ಗಿಡಗಳಿವೆ ಅವುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಂಜ ವಲಯದ ಅರಣ್ಯಾಧಿಕಾರಿಗಳಾದ ಸಂತೋಷ್ ,ಯಶೋಧರ.ಕೆ ಆಗಮಿಸಿ ಗಿಡ ಮರಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೆಸಿಐ ಕಡಬ ಕದಂಬ ಇದರ ಅಧ್ಯಕ್ಷ ಜೆ.ಎಫ್.ಪಿ ಜಾಫಿರ್ ಮಹಮ್ಮದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಜೆ.ಎಫ್.ಎಂ ರಾಜೇಶ್ ಎ ಕೆ, ಜೆ.ಎಫ್.ಡಿ ಕಾಶಿನಾಥ್ ಗೋಗಟೆ, ಸರಸ್ವತೀ ವಿದ್ಯಾಲಯ ಪ್ರೌಢ ಶಾಲೆಯ ಪರಿಸರ ಸಂಘದ ಮೇಲ್ವಿಚಾರಕಿ ಸೌಮ್ಯ ಕೆ ಎ ಉಪಸ್ಥಿತರಿದ್ದರು. ಜೆಸಿಐ ಕಡಬ ಕದಂಬ ಇದರ ಕಾರ್ಯದರ್ಶಿ ಜೆ.ಎಫ್.ಎಂ ಜೇಮ್ಸ್ ಕ್ರಿಶಾಲ್ ಡಿಸೋಜಾ ವಂದಿಸಿದರು.