ಪ್ರಸಿದ್ಧ ಕಂಪೆನಿಗಳ ಕಂಪ್ಯೂಟರ್ಸ್, ಸಿಸಿ ಟಿವಿ ಮಾರಾಟ, ಸೇವಾ ಮಳಿಗೆ ಪಿಂಟೊ ಫ್ಲಾಝಾದಲ್ಲಿ ಟೆಕ್ ಸ್ಪಾರ್ಕಲ್ ಶುಭಾರಂಭ

0

ಪುತ್ತೂರು: ಪ್ರಸಿದ್ಧ ಕಂಪೆನಿಗಳ ಲ್ಯಾಪ್ ಟಾಪ್ಸ್, ಡೆಸ್ಕ್ ಟಾಪ್ಸ್, ಸಿಸಿ ಟಿವಿ, ಹೋಮ್ ಅಟೋಮೇಶನ್ ಸೇಲ್ಸ್ ಆಂಡ್ ಸರ್ವಿಸ್ ಮಳಿಗೆ ಟೆಕ್ ಸ್ಪಾರ್ಕಲ್ ಸೆ.16 ರಂದು ಎಪಿಎಂಸಿ ರಸ್ತೆ ಆದರ್ಶ ಆಸ್ಪತ್ರೆ ಬಳಿಯ ಪಿಂಟೊ ಫ್ಲಾಝಾದ ನೆಲ ಮಹಡಿಯಲ್ಲಿ ಶುಭಾರಂಭಗೊಂಡಿದೆ.


ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ಹಾಗೂ ನೂತನ ಮಳಿಗೆಯ ಮಾಲಕ ಆಶ್ಲಿ ಲೋಬೊರವರ ಕುಟುಂಬದ ಸದಸ್ಯರಾಗಿದ್ದು, ಪ್ರಸ್ತುತ ನಿರ್ಗಾನ್ ಚರ್ಚ್ ನಲ್ಲಿ ಧರ್ಮಗುರುಗಳಾಗಿ ಸೇವೆ ನೀಡುತ್ತಿರುವ ವಂ|ಲಿಯೋ ಲೋಬೊರವರು ಜೊತೆಗೂಡಿ ನೂತನ ಮಳಿಗೆಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಬಳಿಕ ಮಳಿಗೆಗೆ ಪವಿತ್ರ ಜಲ ಸಿಂಪಡಿಸಿ ಆಶೀರ್ವಚಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ದೇವರು ಮನುಷ್ಯನಿಗೆ ಭೂಮಿಯಲ್ಲಿ ಜೀವಿಸಲು ಸುಂದರವಾದ ಜೀವನವನ್ನು ನೀಡಿದ್ದಾರೆ. ನಾವು ನಮ್ಮಲ್ಲಿನ ಪ್ರತಿಭೆ ಮತ್ತು ಶಕ್ತಿಯನ್ನು ಬೆಳಕಿಗೆ ತಂದು ಪ್ರಪಂಚಕ್ಕೆ ಪ್ರಚುರಪಡಿಸುವಂತಾಗಬೇಕು. ವ್ಯವಹಾರದಲ್ಲಿ ಗುಣಮಟ್ಟ ಹಾಗೂ ಸೇವಾ ಮನೋಭಾವನೆಯನ್ನು ಹೊಂದಿದಾಗ ಉದ್ಯಮವು ಯಶಸ್ವಿಯಾಗಿ ಫಲಪ್ರದವಾಗಬಲ್ಲುದು ಎಂದು ಆಶ್ಲಿ ಲೋಬೊರವರ ನೂತನ ಉದ್ಯಮಕ್ಕೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಮಾಯಿದೆ ದೇವುಸ್ ಚರ್ಚ್ ಕಾರ್ಯದರ್ಶಿ ಎವ್ಲಿನ್ ಡಿ’ಸೋಜ, 21 ಆಯೋಗಗಳ ಸಂಚಾಲಕ ಹಾಗೂ ಪುತ್ತೂರು ವಾಳೆ ಗುರಿಕಾರ ಜೋನ್ ಡಿ’ಸೋಜ, ಇಂಜಿನಿಯರ್ ರಾಮಚಂದ್ರ ಘಾಟೆ, ಮಾಲಕ ಆಶ್ಲಿ ಲೋಬೊರವರ ತಂದೆ ಓಸ್ವಾಲ್ಡ್ ಲೋಬೊ, ತಾಯಿ ಗೀತಾ ಲೋಬೊ ಸಹಿತ ಕುಟುಂಬದ ಸದಸ್ಯರು, ಹಿತೈಷಿಗಳು ಹಾಜರಿದ್ದು ಶುಭ ಹಾರೈಸಿದರು. ಮಾಲಕ ಆಶ್ಲಿ ಲೋಬೊರವರ ಸಹೋದರ ಹೇಡನ್ ಲೋಬೊ ವಂದಿಸಿದರು.

ಗ್ರಾಹಕರು ಪ್ರೋತ್ಸಾಹಿಸಿ ಆಶೀರ್ವದಿಸಿ..
ನಮ್ಮಲ್ಲಿ ಪ್ರಸಿದ್ಧ ಕಂಪೆನಿಗಳ ಲ್ಯಾಪ್ ಟಾಪ್ಸ್, ಡೆಸ್ಕ್ ಟಾಪ್ಸ್, ಸಿಸಿ ಟಿವಿ, ಹೋಮ್ ಅಟೋಮೇಶನ್ ಇದರ ಸೇಲ್ಸ್ ಆಂಡ್ ಸರ್ವಿಸ್ ಲಭ್ಯವಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪ್ರಸಿದ್ಧ ಕಂಪೆನಿಗಳ ಐಟಂಗಳ ಖರೀದಿಸಿ ಪ್ರೋತ್ಸಾಹಿಸಿ. ಹೆಚ್ಚಿನ ಮಾಹಿತಿಗೆ 7019463872 ನಂಬರಿಗೆ ಸಂಪರ್ಕಿಸಬಹುದು ಎಂದು ಮಳಿಗೆಯ ಮಾಲಕ ಆಶ್ಲಿ ಲೋಬೊ ಕಲ್ಲಾರೆರವರು ತಿಳಿಸಿದ್ದಾರೆ.

ಪ್ರಥಮ ಖರೀದಿ..
ಮಳಿಗೆಯ ಉದ್ಘಾಟನೆಯ ಅಂಗವಾಗಿ ಬ್ರಿಜಿಟಾಯ್ನ್ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಜಾನೆಟ್ ಪಿಂಟೊರವರು ಕಂಪ್ಯೂಟರ್ ಖರೀದಿಸುವ ಮೂಲಕ ಪ್ರಥಮ ಖರೀದಿಯನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here