ನವರಾತ್ರಿಗೆ ‘ಶ್ರೀ ದೇವಿ ಟೈಗರ್ಸ್‌ ಕಲ್ಲೇಗ’ ತಂಡದಿಂದ ʼಹುಲಿ ವೇಷʼ – ಅ.04ರಂದು ಊದುಪೂಜೆ

0

ಸಮಾಜದಲ್ಲಿರುವ ಅಶಕ್ತ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಉದ್ದೇಶ ಈ ತಂಡದ ಸದಸ್ಯರದ್ದು

ಪುತ್ತೂರು: ಈ ಬಾರಿಯ ನವರಾತ್ರಿಗೆ ಶ್ರೀ ದೇವಿ ಟೈಗರ್ಸ್‌ ಕಲ್ಲೇಗ ಇವರ ʼಹುಲಿ ವೇಷʼ ತಂಡ ಪುತ್ತೂರಿನ ವಿವಿಧ ಕಡೆಗಳಲ್ಲಿ ಹುಲಿ ವೇಷ ಧರಿಸಿ ಕುಣಿಯಲಿದ್ದು, ಇದರ ಊದು ಪೂಜೆಯ ಪೋಸ್ಟರನ್ನು ಸೆ.18ರಂದು ಕಲ್ಲೇಗ ಕಲ್ಕುಡ-ಕಲ್ಲುರ್ಟಿ ದೈವಸ್ಥಾನದ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷರಾಗಿರುವ ಜೀವಂಧರ್‌ ಜೈನ್‌ ಹಾಗೂ ಅಜಿತ್‌ ಕುಮಾರ್ ಜೈನ್‌ ಅವರು ಉಪಸ್ಥಿತರಿದ್ದು ತಂಡಕ್ಕೆ ಶುಭ ಹಾರೈಸಿದರು. ಬಳಿಕ ಶ್ರೀ ದೇವಿ ಟೈಗರ್ಸ್‌ ಕಲ್ಲೇಗ ತಂಡದ ಸದಸ್ಯರು ಕಾರ್ಜಾಲು ದೈವಸ್ಥಾನದಲ್ಲಿ ಮತ್ತು ಹತ್ತೂರ ಒಡೆಯ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಇಲ್ಲಿಯೂ ಸಾಂಕೇತಿಕವಾಗಿ ಪೋಸ್ಟರನ್ನು ಬಿಡುಗಡೆಗೊಳಿಸಿದರು.

ಅಕ್ಟೋಬರ್‌ 04ರಂದು ಸಾಯಂಕಾಲ ಕಲ್ಲೇಗದಲ್ಲಿ ಊದು ಪೂಜೆ ನಡೆಯಲಿದ್ದು, ಬಳಿಕ ಅ.05 ಮತ್ತು 06ರಂದು ʼಹುಲಿ ವೇಷʼ ಪ್ರದರ್ಶನ ನಡೆಯಲಿದೆ.

ಹುಲಿ ಕುಣಿತದ ಹಿಂದಿದೆ ಸಾಮಾಜಿಕ ಕಾಳಜಿ:
ನವರಾತ್ರಿಗೆ ಹುಲಿವೇಷ ಧರಿಸಿ ಪ್ರದರ್ಶನ ನೀಡುವುದರ ಹಿಂದೆ ಧಾರ್ಮಿಕ ಹಿನ್ನಲೆ ಇದೆ, ಮಾತ್ರವಲ್ಲದೇ ಇತ್ತೀಚಿನ ದಿನಗಳಲ್ಲಿ ಹುಲಿ ವೇಷದ ಮೂಲಕ ಸಾಮಾಜಿಕ ಕಳಕಳಿಯ ಕಾರ್ಯಗಳೂ ನಡೆಯುತ್ತಿದೆ. ಅದರಂತೆ. ಶ್ರೀದೇವಿ ಟೈಗರ್ಸ್‌ ಕಲ್ಲೇಗ ತಂಡದವರೂ ಸಹ ಈ ಬಾರಿ ಹುಲಿ ವೇಷ ಪ್ರದರ್ಶನದ ಮೂಲಕ ಗಳಿಸುವ ಮೊತ್ತದಲ್ಲಿ ಒಂದು ಪಾಲನ್ನು ಸಮಾಜದ ಅಶಕ್ತ ಬಡ ಕುಟುಂಬಕ್ಕೆ ಸಹಾಯಹಸ್ತ ಚಾಚುವ ಉದ್ದೇಶವನ್ನಿರಿಸಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಈ ತಂಡದ ಸದಸ್ಯರು ಕಳೆದ 2 ವರ್ಷಗಳಲ್ಲಿ ಸಂಗ್ರಹವಾದ ಒಟ್ಟು ಮೊತ್ತದಲ್ಲಿ 3.50 ಲಕ್ಷ ರೂಪಾಯಿಗಳಷ್ಟನ್ನು ಸುಮಾರು 15 ಬಡ ಕುಟುಂಬಗಳಿಗೆ ನೀಡುವ ಮೂಲಕ ಈ ತಂಡದ ಸದಸ್ಯರು ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ. ಈ ಬಾರಿಯೂ ಹುಲಿ ವೇಷ ಪ್ರದರ್ಶನದಲ್ಲಿ ಸಂಗ್ರಹವಾಗುವ ಮೊತ್ತದಲ್ಲಿ ಸ್ವಲ್ಪ ಭಾಗವನ್ನು ಅಶಕ್ತರಿಗಾಗಿ ಮೀಸಲಿಡುವ ನಿರ್ಧಾರವನ್ನು ತಂಡದ ಸದಸ್ಯರು ಮಾಡಿರುವುದು ಪ್ರಶಂಸನೀಯವಾಗಿದೆ.

ಪೊಳಲಿ – ಕಟೀಲು ಕ್ಷೇತ್ರಗಳಿಗೆ ಭೇಟಿ:
ಶ್ರೀ ದೇವಿ ಟೈಗರ್ಸ್‌ ಕಲ್ಲೇಗ ತಂಡದ ಸದಸ್ಯರು ತಮ್ಮ ತಂಡದ ಹುಲಿ ವೇಷ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಸಂಪ್ರದಾಯದಂತೆ ಪೊಳಲಿ ರಾಜರಾಜೇಶ್ವರಿ ಕ್ಷೇತ್ರ ಹಾಗೂ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರಗಳಿಗೆ ಭೇಟಿ ನೀಡಿ ತಾವು ಕೈಗೊಳ್ಳಲಿರುವ ಕಾರ್ಯ ಯಶಸ್ವಿಯಾಗುವಂತೆ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here