ದರ್ಬೆ ವಿದ್ಯುತ್ ಉಪಕರಣದಲ್ಲಿ ಕಾಣಿಸಿಕೊಂಡ ಹೊಗೆ – ಅಗ್ನಿಶಾಮಕದಳದಿಂದ ನಿಯಂತ್ರಣ

0

ಪುತ್ತೂರು: ದರ್ಬೆ ವೃತ್ತದ ಸಮೀಪದ ಕಟ್ಟಡದ ಮೇಲಂತಸ್ತಿನ ಅಂಗಡಿ ಕೊಠಡಿಯೊಂದರಲ್ಲಿ ವಿದ್ಯುತ್ ಉಪಕರಣವೊಂದರಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಹೊಗೆ ದಟ್ಟವಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಹೊಗೆಯನ್ನು ಶಮನಗೊಳಿಸಿದ ಘಟನೆ ಸೆ.19ರಂದು ನಡೆದಿದೆ.


ದರ್ಬೆ ವೃತ್ತದ ಬಳಿ ಕಟ್ಟಡವೊಂದರ ಮೇಲಂತಸ್ತಿನ ಅಂಗಡಿ ಕೊಠಡಿಯಲ್ಲಿ ಇರಿಸಲಾಗಿದ್ದ ವಿದ್ಯುತ್ ಸಾಮಾಗ್ರಿಯೊಂದಕ್ಕೆ ವಿದ್ಯುತ್ ಪವರ್ ಹೆಚ್ಚಾದರಿಂದ ಅದರಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಹೊಗೆ ಕಾಣಿಸಿಕೊಂಡಿತ್ತು. ಹೊಗೆ ದಟ್ಟವಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದವರು ಅದನ್ನು ನಿಯಂತ್ರಿಸಿದ್ದಾರೆ.

LEAVE A REPLY

Please enter your comment!
Please enter your name here