ಪುತ್ತೂರು: ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಮಂಗಳೂರು ಇದರ ವತಿಯಿಂದ ಇರ್ದೆ ಉಪ್ಪಳಿಗೆ ಸ.ಹಿ.ಪ್ರಾ ಶಾಲಾ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮ, ಶಾಲಾ ತರಕಾರಿ ತೋಟ ರಚನೆ ಮತ್ತು ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮಗಳು ಸೆ.14ರಂದು ನಡೆಯಿತು.
ಸಮಿತಿ ಜಿಲ್ಲಾ ಅಧ್ಯಕ್ಷ ಅಶೋಕ್ ಕೆದಿಲ ಮಾತನಾಡಿ ಸ್ವಚ್ಚತಾ ಮತ್ತು ಸಾವಯವ ಕೃಷಿ ಮತ್ತು ತರಕಾರಿಗಳಿಗೆ ವಿಷಕಾರಿ ಸಿಂಪಡಿಸುವ ಔಷಧೀಯ ಬಗ್ಗೆ ವಿವರಿಸಿದರು. ಸಂಚಾಲಕ ಶ್ರೀಧರ್ ನಾಯ್ಕ ಮಾತನಾಡಿ, ನಮ್ಮ ಊರು ನಾವು ಕಲಿತ ಶಾಲೆಯನ್ನು ಅಭಿವೃದ್ಧಿ ಪಡಿಸಲು ನಾವೆಲ್ಲರೂ ಶ್ರಮಿಸು ಅಗತ್ಯವಿದೆ ಎಂದರು. ಶಾಲಾ ಮುಖ್ಯೋಪಾಧ್ಯಾಯಿನಿ ಲಿಂಗಮ್ಮ ಪ್ರಸ್ತಾವಿಕವಾಗಿ ಮಾತನಾಡಿದರು. ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಲೋಕನಾಥ್ ಆಚಾರ್ಯ, ಜಿಲ್ಲಾ ಮರಾಟಿ ಸಂರಕ್ಷನಾ ಸಮಿತಿಯ ಉಪಾಧ್ಯಕ್ಷರು, ಶಾಲಾ ಸಮಿತಿಯ ಸದಸ್ಯರು, ಶಿಕ್ಷಕರು, ಮಕ್ಕಳ ಪೋಷಕರು ಸ್ವಚ್ಚತಾ ಕೆಲಸಕ್ಕೆ ಸಹಕಾರ ನೀಡಿದರು. ಶಿಕ್ಷಕಿ ಪೂರ್ಣಿಮ ಕರುಣಾಕರ ಸ್ವಾಗತಿಸಿ, ವಂದಿಸಿದರು.