





ಪುತ್ತೂರು:ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು(ಪ್ರಾಯೋಜಕರು:ಬ್ಯಾಂಕ್ ಆಫ್ ಬರೋಡಾ), ಕಾವು ಈಶ್ವರಮಂಗಲ ಗ್ರಾಮ ಸಮಿತಿ ಹಾಗೂ ಲಯನ್ಸ್ ಜಿಲ್ಲೆ 317ಡಿ, ಪ್ರಾಂತ್ಯ 4, ವಲಯ ಒಂದರ ಲಯನ್ಸ್ ಕ್ಲಬ್ ಪುತ್ತೂರು ಕಾವು, ಶಾರದಾ ಆಯುರ್ವೇದ ಮತ್ತು ನ್ಯಾಚುರೋಪಥಿ ಕಾಲೇಜು ಇದರ ಸಹಭಾಗಿತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕಾವು ಇದರ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸೆ.21 ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕಾವು ಇಲ್ಲಿ ಬೆಳಿಗ್ಗೆ ನಡೆಯಲಿದೆ.


ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ವ್ಯಾಪಾರ ಅಭಿವೃದ್ಧಿ ಸಹಾಯಕ ವಿಶ್ವನಾಥ ರೈಯವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಲಯನ್ಸ್ ಕ್ಲಬ್ ಪುತ್ತೂರು ಕಾವು ಅಧ್ಯಕ್ಷ ಜಗನ್ನಾಥ ರೈ ಗುತ್ತುರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಲಯನ್ಸ್ ಜಿಲ್ಲೆ 317ಡಿ ಇದರ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಮನಾಥ ಶೆಟ್ಟಿ ಕಾವು, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಇದರ ಆಡಳಿತ ಮಂಡಳಿ ಸದಸ್ಯ ಜಯಪ್ರಕಾಶ್ ರೈ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಕಾವು ಈಶ್ವರಮಂಗಲ ಘಟಕದ ಅಧ್ಯಕ್ಷ ಬಿ. ಪಾವನಾ ರಾಮ, ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಮೆಡಿಕಲ್ ಆಫೀಸರ್ ಡಾ.ಭಾವನ, ಗೌರವ ಉಪಸ್ಥಿತಿಯಾಗಿ ಬ್ಯಾಂಕ್ ಆಫ್ ಬರೋಡಾ ಕಾವು ಶಾಖೆಯ ಮುಖ್ಯ ಪ್ರಬಂಧಕ ಅರುಣ್ ಕುಮಾರ್, ಬ್ಯಾಂಕ್ ಆಫ್ ಬರೋಡಾ ಈಶ್ವರಮಂಗಲ ಶಾಖೆಯ ಮುಖ್ಯ ಪ್ರಬಂಧಕ ಗೋಪಾಲಕೃಷ್ಣನ್, ಉಪನ್ಯಾಸಕರು ಹಾಗೂ ಮೆಡಿಕಲ್ ಆಫೀಸರ್ ಡಾ.ನಯನಶ್ರೀ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕಾವು ಇದರ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರತಿಮಾ ಎಸ್.ರವರು ಉಪಸ್ಥಿತಲಿರುವರು ಎಂದು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಕಾವು ಈಶ್ವರಮಂಗಲ ಘಟಕದ ಅಧ್ಯಕ್ಷ ಬಿ. ಪಾವನಾ ರಾಮ, ಕಾರ್ಯದರ್ಶಿ ಅಮರನಾಥ ಆಳ್ವ, ಕೋಶಾಧಿಕಾರಿ ಅಮ್ಮು ರೈ, ಲಯನ್ಸ್ ಕ್ಲಬ್ ಪುತ್ತೂರು ಕಾವು ಅಧ್ಯಕ್ಷ ಜಗನ್ನಾಥ ರೈ ಗುತ್ತು, ಕಾರ್ಯದರ್ಶಿ ದೇವಿಶ ರೈ, ಕೋಶಾಧಿಕಾರಿ ಕೆ.ಇಬ್ರಾಹಿಂ ಹಾಜಿ, ಕಾವು ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಗುರುಗಳು ಮತ್ತು ಅಧ್ಯಾಪಕ ವೃಂದ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







            





