ಅರಿಯಡ್ಕ: ಅರಿಯಡ್ಕ ಗ್ರಾಮ ಪಂಚಾಯತ್ 2023-2024 ನೇ ಸಾಲಿನ ಪಂಚಾಯತ್ ಜಮಾಬಂಧಿ ಸಭೆ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿಯವರ ಅಧ್ಯಕ್ಷತೆಯಲ್ಲಿ ಸೆ.19 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಲೆಕ್ಕ ಪತ್ರಗಳ ದಾಖಲೆ ಮತ್ತು ಸಭೆಯ ನಂತರ ಹಿಂದಿನ ವರ್ಷ ನಿರ್ವಹಿಸಿದ ಕಾಮಗಾರಿಗಳ ಪರಿಶೀಲನೆ ನಡೆಸಲಾಯಿತು. ಸಾಮಾಜಿಕ ಅರಣ್ಯ ಇಲಾಖೆ ಪುತ್ತೂರು ಇದರ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ಪಿ.ಕೆ ಮಾರ್ಗದರ್ಶಿ ಅಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡಿದರು.ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಇಂಜಿನಿಯರ್ ಕುಶಾ ಕುಮಾರ್, ತಾಲೂಕು ಪಂಚಾಯತ್ ವಿಷಯ ನಿರ್ವಾಹಕ ಸುರೇಶ್ ಪೂಜಾರಿ, ಉಪಸ್ಥಿತರಿದ್ದರು.
ಪ್ರಮಾಣ ವಚನ
ಕಾರ್ಯಕ್ರಮದಲ್ಲಿ ,ಸ್ವಚ್ಛತೆಯೇ ಸೇವೆ- 2024 ವೇದವಾಕ್ಯದಡಿ ಪ್ರಮಾಣ ವಚನ ಸ್ವೀಕಾರ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಸೌಮ್ಯ ಬಾಲಸುಬ್ರಹ್ಮಣ್ಯ, ಅನಿತಾ ಆಚಾರಿ ಮೂಲೆ, ಜಯಂತಿ ಪಟ್ಟು ಮೂಲೆ, ಪುಷ್ಪ ಲತಾ ಮರತ್ತಮೂಲೆ, ಭಾರತಿ ವಸಂತ್ ಕೌಡಿಚ್ಚಾರು, ಲೋಕೇಶ್ ಚಾಕೋಟೆ, ಉಷಾ ರೇಖಾ ರೈ ಅಮೈ, ರಾಜೇಶ್ ತ್ಯಾಗ ರಾಜೆ, ಹರೀಶ್ ರೈ ಜಾರುತ್ತಾರು, ಪ್ರವೀಣ ಎ.ಬಿ , ಸದಾನಂದ ಮಣಿಯಾಣಿ, ಹೇಮಾವತಿ ಚಾಕೋಟೆ ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಪಂಚಾಯತ್ ಪಿಡಿಒ ಸುನಿಲ್ ಎಚ್.ಟಿ ಸ್ವಾಗತಿಸಿ, ಪಂಚಾಯತ್ ಪಂಚಾಯತ್ ಕಾರ್ಯದರ್ಶಿ ಶಿವರಾಮ ಮೂಲ್ಯ ವರದಿ ವಾಚಿಸಿ, ವಂದಿಸಿದರು.