ಶ್ರೀ ಆದಿಚುಂಚನಗಿರಿ ಕಾವೂರು ಶಾಖಾ ಮಠದ ರಜತಮಹೋತ್ಸವಕ್ಕೆ ಪೂರ್ವ ಭಾವಿ ಸಭೆ

0


ಪುತ್ತೂರು ಸಹಿತ ಸುಳ್ಯ, ಬೆಳ್ತಂಗಡಿ, ಕಡಬದಿಂದ ಹಲವಾರು ಮಂದಿ ಪ್ರಮುಖರು ಭಾಗಿ

ಪುತ್ತೂರು: 2025ರ ಜನವರಿ ತಿಂಗಳಲ್ಲಿ ನಡೆಯಲಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಕಾವೂರು ಶಾಖಾ ಮಠ ಮತ್ತು ಬಿಜಿಎಸ್ ಶಿಕ್ಷಣ ಸಂಸ್ಥೆಗಳ ರಜತಮಹೋತ್ಸವವನ್ನು ಆಚರಿಸುವ ಸಲುವಾಗಿ ಪೂರ್ವಭಾವಿ ಸಭೆಯು ಸೆ.20ರಂದು ಕಾವೂರು ಶಾಖಾ ಮಠದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಶ್ರೀ ಧರ್ಮಪಾಪನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯಿತು.


ನಿರಂತರ ಹಲವು ಕಾರ್ಯಕ್ರಮ:
ಡಾ| ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಮಾತನಾಡಿ ಶಾಖಾ ಮಠ ಮತ್ತು ಬಿಜಿಎಸ್ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವವನ್ನು ಜೊತೆಯಾಗಿ ಮಾಡುವ ಚಿಂತನೆಯೊಂದಿಗೆ ಪೂರ್ವ ಭಾವಿ ಸಭೆ ಕರೆಯಲಾಗಿದೆ. ಎಲ್ಲಾ ಸಮುದಾಯದವರ ಸಹಕಾರ ಬೇಕಾಗಿದೆ. ಈ ನಿಟ್ಟಿನಲ್ಲಿ ಶೈಕ್ಷಣಿಕಕ್ಕೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳು, ಕಾರ್ಯಾಗಾರವನ್ನು ನಡೆಸಲಾಗುವುದು. ಕಾವೂರಿನಿಂದ ಶಾಖಾ ಮಠದ ತನಕ ಕುಣಿತ ಭಜನೆ, ಶಾಲಾ ಮತ್ತು ಕಾಲೇಜು ಶಿಕ್ಷಕರಿಗೆ ಶೈಕ್ಷಣಿಕ ವಿಚಾರದಲ್ಲಿ ವಿಚಾರಗೋಷ್ಠಿ, ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರಬಂದ ಸ್ಪರ್ಧೆ ಸಹಿತ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ. ಸುಮಾರು 25 ಮಂದಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ಮಾಡಲಾಗುವುದು ಎಂದ ಅವರು ಎಲ್ಲರ ಸಹಕಾರ ಕೋರಿದರು. ಮಂಗಳೂರು ಶಾಸಕ ಡಾ. ಭರತ್ ಶೆಟ್ಟಿ, ಹಾಗೂ ಹೊಸದಿಂಗತ ಪತ್ರಿಕೆಯ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪಿ. ಎಸ್ ಪ್ರಕಾಶ್ ಮತ್ತು ಮಾಜಿ ಶಾಸಕ ಸಂಜೀವ ಮಠಂದೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರಿನಿಂದ ಎವಿಜಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಸಂಚಾಲಕ ಎ.ವಿ.ನಾರಾಯಣ, ಅಮರನಾಥ ಗೌಡ, ಪುರುಷೋತ್ತಮ ಮುಂಗ್ಲಿಮನೆ, ಶಿವರಾಮ ಮತಾವು, ವಾರಿಜಾ ಸಹಿತ ಸುಳ್ಯ, ಬೆಳ್ತಂಗಡಿ, ಕಡಬದಿಂದ ಹಲವಾರು ಮಂದಿ ಭಾಗವಹಿಸಿದರು.


ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 71ನೇ ಪೀಠಾಧಿಪತಿಯಾಗಿ 1974ರಲ್ಲಿ ಪೂಜ್ಯ ಪೀಠಾರೋಹಣ ಮಾಡಿದ ಪರಮ ಪೂಜ್ಯ ಜಗದ್ಗುರು ಪದ್ಮಭೂಷಣ ಡಾ. ಶ್ರೀ ಬಾಲಗಂಗಾಧರ-ನಾಥ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಸಮಾಜಸೇವೆಯ ಹಿತಚಿಂತಕ ಕಾರ್ಯಗಳು ಭಾರಿ ವೇಗ ಪಡೆದುಕೊಂಡವು. ಅವರ ಉಸ್ತುವಾರಿಯಲ್ಲಿ ಮಠವು ಆಹಾರ, ಶಿಕ್ಷಣ ಮತ್ತು ಆರೋಗ್ಯದ ಮೂಲಕ ತನ್ನ ಸಾಮಾಜಿಕ ಸೇವೆಯ ಚಟುವಟಿಕೆಗಳನ್ನು ಉತ್ತೇಜಿಸಿತು. ರಾಜ್ಯದಲ್ಲಿ ಸಮಾಜ ಸೇವೆಯ ಸಂದೇಶವನ್ನು ಹರಡಲು ವ್ಯಾಪಕ ಪ್ರವಾಸ ಮಾಡಿದರು. ಅವರು 1979ರಲ್ಲಿ ದಕ್ಷಿಣ ಕನ್ನಡದ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ಪ್ರವಾಸ ಮಾಡಿದರು.

1999ರಲ್ಲಿ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರಿಗೆ ಕರಾವಳಿ ಕರ್ನಾಟಕದ ಜವಾಬ್ದಾರಿಯನ್ನು ನೀಡಲಾಯಿತು ಮತ್ತು ಮಂಗಳೂರಿನ ಕಾವೂರಿನಲ್ಲಿರುವ ಮಠವನ್ನು ನೋಡಿಕೊಳ್ಳಲು ತಿಳಿಸಲಾಯಿತು. ಅವರನ್ನು ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ನೇಮಿಸಲಾಯಿತು .ದಕ್ಷಿಣ ಕನ್ನಡ ಮತ್ತು ಉಡುಪಿಯ ಈ ಭಾಗದ ಉಸ್ತುವಾರಿ ವಹಿಸಿಕೊಂಡ ನಂತರ ಅವರು ಕ್ಷೇತ್ರದಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿ ಶಿಕ್ಷಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

LEAVE A REPLY

Please enter your comment!
Please enter your name here