ನೆಕ್ಸಾ ಎಕ್ಸ್ಚೇಂಜ್ ಲೋನ್ ಮೇಳ – ಫ್ರೀ ಚೆಕ್ ಅಪ್ ಕ್ಯಾಂಪ್ -ಇಂದು(ಸೆ.21) ಕೊನೆ

0

ಪುತ್ತೂರು: ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ ಹಾಗೂ ಭಾರತ್ ನೆಕ್ಸಾ ಇದರ ಸಹಭಾಗಿತ್ವದಲ್ಲಿ ಎರಡು ದಿನಗಳ ಮೆಗಾ ಎಕ್ಸ್ಚೇಂಜ್ ಲೋನ್ ಮೇಳ ಮತ್ತು ಫ್ರೀ ಚೆಕ್ ಅಪ್ ಕ್ಯಾಂಪ್ ಇಲ್ಲಿನ ಕಿಲ್ಲೆ ಮೈದಾನದಲ್ಲಿ ಆಯೋಜನೆ ಮಾಡಿದ್ದು , ಸೆ. 21 ರಂದು ಈ ಮೇಳ ಕೊನೆಯಾಗಲಿದೆ.


ಮೆಚ್ಚಿನ ಮಾರುತಿ ಗ್ರಾಹಕರು ಈ ಮೇಳದ ಪ್ರಯೋಜನ ಪಡೆಯುವಂತೆ ನೆಕ್ಸಾ ಸಂಸ್ಥೆ ಪ್ರಕಟಣೆ ತಿಳಿಸಿದೆ. ಇದರ ಜೊತೆಗೆ ಬೃಹತ್ ಕೊಡುಗೆಯನ್ನು ಕೂಡ ಭಾರತ್ ನೀಡಲು ಮುಂದಾಗಿದ್ದು , ಕಾರು ಪ್ರಿಯರು ತಮ್ಮ ಇಷ್ಟದ ಕಾರುಗಳ ಖರೀದಿಗೆ ಭಾರತ್ ನೆಕ್ಸಾ ವತಿಯಿಂದ ಭರ್ಜರಿ ಕೊಡುಗೆಯೂ ಸಿದ್ಧವಾಗಿದೆ.


ಸುಮಾರು 2.53 ಲಕ್ಷ ರೂಪಾಯಿವರೆಗಿನ ಕೊಡುಗೆಗಳನ್ನು ಘೋಷಣೆ ಮಾಡಿರುವ ಭಾರತ್ ನೆಕ್ಸಾ , ಗುಣಮಟ್ಟದ ವ್ಯಾರಂಟಿ ಅಥವಾ ಐದು ವರ್ಷಗಳಿಗೆ ಹೆಚ್ಚಿಸಿದ ವ್ಯಾರಂಟಿಯನ್ನು ಗ್ರಾಹಕರಿಗೆ ನೀಡುವಂತಹ ವಾಗ್ದಾನ ಮಾಡಿದೆ.


ಯುವ ಸಮೂಹದ ಮೆಚ್ಚಿನ ಜಿಮ್ನಿ ಖರೀದಿಗೆ 2.53 ಲಕ್ಷ ಉಳಿತಾಯವಿದ್ದರೆ, ಫ್ರಾಂಕ್ಸ್ ಗೆ 86 ಸಾವಿರ , ಗ್ರ್ಯಾಂಡ್ ವಿಟಾರ 1.31 ಲಕ್ಷ ಜೊತೆಗೆ 5 ವರುಷಗಳ ಎಕ್ಸ್ಟೆಂಡೆಡ್ ವ್ಯಾರಂಟಿ ಹಾಗೂ ಬೆಲೆನೋ ಮೇಲೆ 1.05 ಲಕ್ಷ ಮತ್ತು ಇಗ್ನಿಸ್ ಗೆ 56ಸಾವಿರ ರೂಪಾಯಿಯ ಕೊಡುಗೆ ಕಾರು ಪ್ರಿಯರನ್ನು ಸೇರಲಿದೆ. ಇಷ್ಟೇಯಲ್ಲದೇ ಇಗ್ನೀಶ್ ಮತ್ತು ಬೆಲೆನೋ ಮೇಲೆ 100% ಫಂಡಿಂಗ್ ಇದ್ದು , ಸರಳ ,ಸುಲಭ ದಾಖಲೆ , ತ್ವರಿತ ಸಾಲ ವ್ಯವಸ್ಥೆ , ಕಡಿಮೆ ದರದ ಲೋನ್ ಸೌಲಭ್ಯ ಸಿಗಲಿದೆ.
ಇನ್ನೂ ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 8050293030 , 7624893030, 9620893030 ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here