ಕಬಡ್ಡಿ ಪಂದ್ಯಾಟ- ಲಿಟ್ಲ್ ಫ್ಲವರ್ ಹಿ ಪ್ರಾ. ಶಾಲೆ ಸತತ 2ನೇ ಬಾರಿಗೆ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

0

ಪುತ್ತೂರು :ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ,ಉಪನಿರ್ದೇಶಕರ ಕಛೇರಿ(ಆಡಳಿತ)ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ , ಹಾಗೂ ದ. ಕ. ಜಿ. ಪ. ಉನ್ನತ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು ಇಲ್ಲಿ ನಡೆದ 14 ರ ವಯೋಮಾನದ ಬಾಲಕಿಯರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲಾ ತಂಡವು ಸತತ 2ನೇ ಬಾರಿಗೆ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.


ದ.ಕ ಜಿಲ್ಲೆಯ ಏಳು ತಾಲೂಕುಗಳಿಂದ ಪ್ರಬಲ ಏಳು ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಶಾಲಾ ವಿದ್ಯಾರ್ಥಿಗಳ ತಂಡ ಪ್ರಬಲ ಸ್ಪರ್ಧೆ ನೀಡುವ ಮುಖಾಂತರ ಸೆಮಿ ಫೈನಲ್‌ನಲ್ಲಿ ಗರಿಷ್ಠ 60 ಅಂಕಗಳು ಹಾಗೂ ಫೈನಲ್ ನಲ್ಲಿ 20 ಅಂಕಗಳ ಅಂತದಲ್ಲಿ ಭರ್ಜರಿ ಜಯಗಳಿಸಿ ಚಾಂಪಿಯನ್ ನ್ನು ತನ್ನ ಮುಡಿಗೇರಿಸಿಕೊಂಡಿದೆ. ಶಾಲಾ ತಂಡದ ಜುವೆನ್ನಾ ಕುಟಿನ್ಹಾ ಸವ್ಯಸಾಚಿ ಹಾಗೂ ಸನ್ನಿಧಿ ಉತ್ತಮ ಹಿಡಿತಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಜೆನಿಟಾ, ಜಶ್ಮಿತಾ, ಸುಶ್ರಾವ್ಯ, ಫಾತಿಮತ್ ಅಫ್ರ, ಆಯಿಷತ್ ಶೈಮ, ಹಾರ್ದಿಕ, ಸಾಕ್ಷಿ, ಅನ್ವಿತಾ, ಅನ್ವಿ, ಜೀವಿಕಾ ತಂಡದಲ್ಲಿ ಭಾಗವಹಿಸಿದ್ದರು. ಕಳೆದ ಸಾಲಿನಲ್ಲಿ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ತಂಡವು ಸತತ ಐದನೇ ಬಾರಿಗೆ ಜಿಲ್ಲಾ ಮಟ್ಟ ಹಾಗೂ ಎರಡನೇ ಬಾರಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ದ.ಕ ಜಿಲ್ಲೆಯಲ್ಲಿ ಬಲಿಷ್ಠ ತಂಡವಾಗಿ ಮೂಡಿಬಂದಿದೆ.ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಮಾರ್ಗದರ್ಶನದಲ್ಲಿ ಸಹ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here