ವಿವಿಧ ಸಂಘ-ಸಂಸ್ಥೆಗಳಿಂದ ಕಾವು ಉನ್ನತ ಹಿ.ಪ್ರಾ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಉತ್ತಮ ಆರೋಗ್ಯಕ್ಕೆ ಪ್ರಕೃತಿ ಚಿಕಿತ್ಸೆ ಪೂರಕವಾಗಿದೆ-ಕಾವು ಹೇಮನಾಥ ಶೆಟ್ಟಿ

ಪುತ್ತೂರು:ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು(ಪ್ರಾಯೋಜಕರು:ಬ್ಯಾಂಕ್ ಆಫ್ ಬರೋಡಾ), ಕಾವು ಈಶ್ವರಮಂಗಲ ಗ್ರಾಮ ಸಮಿತಿ ಹಾಗೂ ಲಯನ್ಸ್ ಜಿಲ್ಲೆ 317ಡಿ, ಪ್ರಾಂತ್ಯ 4, ವಲಯ ಒಂದರ ಲಯನ್ಸ್ ಕ್ಲಬ್ ಪುತ್ತೂರು ಕಾವು, ಮಂಗಳೂರು ತಲಪಾಡಿ, ದೇವಿನಗರ ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಹಾಗೂ ಕಾಲೇಜು ಇದರ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕಾವು ಇದರ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸೆ.21 ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕಾವು ನಡೆಯಿತು.


ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಲಯನ್ಸ್ ಕ್ಲಬ್‌ನ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ, ಕಾವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕಾರ ಮಾಡಿರುವ ಕಾವು ಹೇಮನಾಥ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪ್ರಕೃತಿ ಚಿಕಿತ್ಸೆ ಎಂಬುದು ಆಯುರ್ವೇದದ ಒಂದು ಭಾಗವಾಗಿದೆ. ಪ್ರಕೃತಿ ಚಿಕಿತ್ಸೆಯು ಇತಿಹಾಸದಲ್ಲಿ ಬಹಳ ಪ್ರಸಿದ್ಧಿ ಪಡೆದ ಚಿಕಿತ್ಸೆಯಾಗಿದೆ. ಪ್ರಕೃತಿಯಲ್ಲಿ ಸಿಗುವ ಕೆಲವೊಂದು ವಸ್ತುಗಳು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಶಕ್ತವಾಗಬಲ್ಲವು ಎಂದರು.


ಅಧ್ಯಕ್ಷತೆ ವಹಿಸಿದ ಲಯನ್ಸ್ ಕ್ಲಬ್ ಪುತ್ತೂರು ಕಾವು ಅಧ್ಯಕ್ಷ ಜಗನ್ನಾಥ್ ರೈ ಗುತ್ತು ಮಾತನಾಡಿ, ಆರೋಗ್ಯ ಶಿಬಿರಗಳು ಹಮ್ಮಿಕೊಳ್ಳುವುದರಿಂದ ಆಯಾ ಗ್ರಾಮಕ್ಕೆ ಒಳಿತ್ತನ್ನೇ ಒದಗಿಸುವುದು, ಇದರ ಸದುಪಯೋಗ ಎಲ್ಲರದಾಗಲಿ. ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮಲ್ಲಿಯೇ ಇದ್ದು, ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಒಳ್ಳೆಯ ಆರೋಗ್ಯವು ತಮ್ಮದಾಗಲಿ ಎಂದರು.


ಲಯನ್ಸ್ ಕ್ಲಬ್ ಪುತ್ತೂರು ಕಾವು ಪೂರ್ವಾಧ್ಯಕ್ಷ ರಮೇಶ್ ರೈ ಸಾಂತ್ಯ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನ ಒತ್ತಡದ ಕಾಲಘಟ್ಟದಲ್ಲಿ ಜೀವನಶೈಲಿಯ ಬದಲಾವಣೆಯಿಂದ ಅನೇಕ ರೋಗಗಳು ಅಂಟಿಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಯೋಗ, ನ್ಯಾಚುರೋಪಥಿಯಂತಹ ಚಿಕಿತ್ಸೆ ಅಗತ್ಯದ ಜೊತೆಗೆ ಶುದ್ಧ ಸಾವಯವ ಆಹಾರದ ಸೇವನೆ ಮುಖ್ಯವಾಗಿದೆ. ಐಟಿ ಕಂಪೆನಿಗಳಲ್ಲಿ ಮಿಡ್‌ನೈಟ್ ತನಕ ಕೆಲಸ ಮಾಡುವುದರಿಂದ ದೇಹವು ಮಾನಸಿಕವಾಗಿ ಕುಗ್ಗುತ್ತದೆ ಎಂದರು.


ದಾನಿಗಳಿಗೆ ಗೌರವಾರ್ಪಣೆ:
ಕಾವು ಶಾಲೆಯ ಭೋಜನಾಲಯದ ವಿದ್ಯುತ್ ಸಂಪರ್ಕ ಒದಗಿಸಿಕೊಟ್ಟ ಲಯನ್ಸ್ ಕ್ಲಬ್ ಪ್ರಾಂತ್ಯ ಅಧ್ಯಕ್ಷ ಪಾವನರಾಮ್, ಎರಡು ಫ್ಯಾನ್ ಒದಗಿಸಿಕೊಟ್ಟ ಲಯನ್ಸ್ ಕ್ಲಬ್ ಪುತ್ತೂರು ಕಾವು ಕೋಶಾಧಿಕಾರಿ ಇಬ್ರಾಹಿಂ ಹಾಜಿ, ಧ್ವನಿವರ್ಧಕವನ್ನು ಒದಗಿಸಲು ಸಹಕಾರವಿತ್ತ ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್‌ರವರನ್ನು ಶಾಲು ಹೊದಿಸಿ ಗೌರವಾರ್ಪಣೆ ಸಲ್ಲಿಸಲಾಯಿತು.


ಗಿಡಗಳನ್ನು ಬೆಳೆಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ:
ಲಯನ್ಸ್ ಕ್ಲಬ್ ಪುತ್ತೂರು ಕಾವು ವತಿಯಿಂದ ಕಳೆದ ವರ್ಷ ವನಮಹೋತ್ಸವದ ಪ್ರಯುಕ್ತ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಗಿಡಗಳ ಪೋಷಣೆಯನ್ನು ಯಶಸ್ವಿಯಾಗಿ ಮಾಡಿದ ಶಾಲೆಯ 13 ಮಂದಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಪ್ರಸ್ತುತ ವರ್ಷವೂ ವನಮಹೋತ್ಸವ ದಿನದಂದು ಗಿಡಗಳನ್ನು ವಿತರಿಸಲಾಗಿದ್ದು ಯಾರು ಉತ್ತಮ ರೀತಿಯಲ್ಲಿ ಪೋಷಣೆ ಮಾಡುತ್ತಾರೋ ಅವರಿಗೆ ಮುಂದಿನ ವರ್ಷ ಇದೇ ರೀತಿ 23 ಮಂದಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಲಯನ್ಸ್ ಕ್ಲಬ್ ಪ್ರಾಂತ್ಯ ಅಧ್ಯಕ್ಷ ಪಾವನರಾಮ್ ಹೇಳಿದರು.


ಮಂಗಳೂರಿನ ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಕಾಲೇಜಿನ ಉಪನ್ಯಾಸಕಿ ಡಾ.ನಯನಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಾಲಾ ಪ್ರಭಾರ ಮುಖ್ಯಗುರು ಪ್ರತಿಮಾ ಎಸ್ ಸ್ವಾಗತಿಸಿ, ಸಹ ಶಿಕ್ಷಕಿ ಶಮೀಮಾ ವಂದಿಸಿದರು. ಲಯನ್ಸ್ ಕ್ಲಬ್ ಪುತ್ತೂರು ಕಾವು ಪೂರ್ವಾಧ್ಯಕ್ಷ ದಿವ್ಯನಾಥ ಶೆಟ್ಟಿರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಶಿಕ್ಷಕಿ ವಸಂತಿ ಕಾರ್ಯಕ್ರಮ ನಿರೂಪಿಸಿದರು. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಕಾವು ಈಶ್ವರಮಂಗಲ ಘಟಕದ ಕಾರ್ಯದರ್ಶಿ ಅಮರನಾಥ ಆಳ್ವ, ಕೋಶಾಧಿಕಾರಿ ಅಮ್ಮು ರೈ, ಲಯನ್ಸ್ ಕ್ಲಬ್ ಪುತ್ತೂರು ಕಾವು ಕಾರ್ಯದರ್ಶಿ ದೇವಿಶ ರೈ, ಕೋಶಾಧಿಕಾರಿ ಕೆ.ಇಬ್ರಾಹಿಂ ಹಾಜಿ, ಕಾವು ಸರಕಾರಿ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಅಝೀಝ್, ಕಾರ್ಯದರ್ಶಿ ಹರೀಶ್ ಕುಂಜತ್ತಾಯ ಸಹಿತ ಹಲವರು ಉಪಸ್ಥಿತರಿದ್ದರು. ಶಾಲೆಯ ಅಧ್ಯಾಪಕ ವೃಂದ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರು ಸಹಕರಿಸಿದರು. ಮಂಗಳೂರು ಶಾರದಾ ಯೋಗ ಮತ್ತು ನ್ಯಾಚುರೋಪತಿ ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರುಗಳು ಹಾಗೂ ಸಿಬ್ಬಂದಿಗಳಿಂದ ಉಚಿತ ಆರೋಗ್ಯ ಶಿಬಿರ ಏರ್ಪಟ್ಟಿತು.

ಉತ್ತಮ ಆರೋಗ್ಯಕ್ಕೆ ಯೋಗ, ನ್ಯಾಚುರೋಪತಿ ಪರಿಹಾರ..
ಪ್ರಸ್ತುತ ವಿದ್ಯಾಮಾನದಲ್ಲಿ ಯೋಗದ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ನ್ಯಾಚುರೋಪತಿ ವೈದ್ಯಕೀಯ ಎಂಬುದು ಹಿಂದಿನ ಕಾಲದಿಂದಲೂ ನಡೆದು ಬಂದ ವೈದ್ಯಕೀಯ ವಿಧಾನವಾಗಿದೆ. ಇಂದಿನ ಜಗತ್ತಿನಲ್ಲಿ ಆಹಾರ ಪದ್ಧತಿ, ದೈನಂದಿನ ಒತ್ತಡ, ವ್ಯಾಯಾಮದ ಕೊರತೆಯಿಂದ ಮಾನವ ತನ್ನ ಆರೋಗ್ಯವನ್ನು ಅಧಃಪತನದತ್ತ ಕೊಂಡೊಯ್ಯುತ್ತಿದ್ದಾನೆ ಮಾತ್ರವಲ್ಲ ಇದರಿಂದ ರಕ್ತದೊತ್ತಡ, ಮಧುಮೇಹ ಏರುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಸಣ್ಣ ಮಕ್ಕಳಲ್ಲೂ ಮಧುಮೇಹ ಕಂಡುಬರುತ್ತಿದೆ. ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಕೃತಿ ಚಿಕಿತ್ಸೆಯಲ್ಲಿ ಸುಲಭವಾದ ಉತ್ತಮ ಆಯಾಮಗಳಿದ್ದು ಸಾರ್ವಜನಿಕರು ಇದರ ಪ್ರಯೋಗ ಪಡೆದುಕೊಳ್ಳುವಂತಾಗಬೇಕು.
-ಡಾ.ಭಾವನಾ, ಅಸಿಸ್ಟೆಂಟ್ ಪ್ರೊಫೆಸರ್, ಶಾರದಾ ಯೋಗ ಮತ್ತು ನ್ಯಾಚುರೋಪತಿ ವೈದ್ಯಕೀಯ ಕಾಲೇಜು, ಮಂಗಳೂರು

ಪ್ರಕೃತಿ ಚಿಕತ್ಸೆಯೇ ಮದ್ದು..
ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ ಮಂಗಳೂರು ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಪಾವನರಾಮ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಬ್ಯಾಂಕ್ ಆಫ್ ಬರೋಡಾ ಪ್ರಾಯೋಜಕತ್ವದ ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನವು ಈ ವರ್ಷ ಎರಡನೇ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶೀಘ್ರದಲ್ಲಿ ಈಶ್ವರಮಂಗಲದಲ್ಲಿ ಕಣ್ಣಿನ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ. ಪ್ರಕೃತಿಯ ಜೀವನಶೈಲಿಯ ಬದಲಾವಣೆಗೆ ಪ್ರಕೃತಿ ಚಿಕಿತ್ಸೆಯೇ ಮದ್ದು ಎನಿಸಲಿದೆ ಎಂದರು.

ಧ್ವನಿವರ್ಧಕ ಹಸ್ತಾಂತರ..
ಶಾಲೆಯ ಬಹು ಬೇಡಿಕೆಯ ಧ್ವನಿವರ್ಧಕವನ್ನು ಲಯನ್ಸ್ ಕ್ಲಬ್ ಪುತ್ತೂರು ಕಾವು ವತಿಯಿಂದ ಧ್ವನಿವರ್ಧಕ(ರೂ.20 ಸಾವಿರ ವೆಚ್ಚ)ವನ್ನು ಲಯನ್ಸ್ ಕ್ಲಬ್ ಪುತ್ತೂರು ಕಾವು ಅಧ್ಯಕ್ಷ ಜಗನ್ನಾಥ ರೈ ಗುತ್ತುರವರು ಕಾವು ಶಾಲೆಯ ದತ್ತು ಸ್ವೀಕರಿಸಿದ ಕಾವು ಹೇಮನಾಥ ಶೆಟ್ಟಿರವರಿಗೆ ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here