ಜಾನುವಾರು ವಧೆ ಪ್ರಕರಣ- ಆರೋಪಿಗಳ ಗುರುತು ಪತ್ತೆ

0

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ 34ನೇ ನೆಕ್ಕಿಲಾಡಿ ಗ್ರಾಮದ ಆದರ್ಶನಗರ ಬಳಿಯ ಕಜೆ ಎಂಬಲ್ಲಿರುವ ಖದೀಜಮ್ಮ ಎಂಬವರ ಅಡಿಕೆ ತೋಟದಲ್ಲಿ ಅಕ್ರಮವಾಗಿ ಗೋ ಹತ್ಯೆಗೈದು ಮಾಂಸ ತಯಾರಿಸುತ್ತಿದ್ದ ಕೃತ್ಯಕ್ಕೆ ಸಂಬಂಧಿಸಿ ಐವರು ಆರೋಪಿಗಳ ಗುರುತು ಪತ್ತೆ ಮಾಡಿರುವ ಪೊಲೀಸರು, ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಈ ಕೃತ್ಯದಲ್ಲಿ ಆರೋಪಿಗಳಾದ ರಫೀಕ್, ನಝೀರ್, ಉಬೈದ್, ಅಶ್ರಫ್ ಹಾಗೂ ನಿಜಾಮುದ್ದೀನ್ ಎಂಬವರು ಭಾಗಿಯಾಗಿದ್ದು, ಇವರು ಪೊಲೀಸ್ ದಾಳಿಯ ಸಂದರ್ಭ ಓಡಿ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆ.21ರಂದು ಸ್ಥಳಕ್ಕೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಸ್ಥಳದಿಂದ 96 ಕೆ.ಜಿ. ದನದ ಮಾಂಸ, ದೇಹದ ಅಂಗಾಂಗಳು, ಮಾಂಸ ಮಾಡಲು ಬಳಸಿದ ಚೂರಿಗಳು, ಕಬ್ಬಿಣದ ಎಲೆಕ್ಟ್ರಾನಿಕ್ ತೂಕದ ಯಂತ್ರ, ಎರಡು ಅಟೋ ರಿಕ್ಷಾ ಹಾಗೂ ಒಂದು ಬೈಕ್ ಅನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ಮೇಲೆ 107/2024 ಕಲಂ: 12 ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ 3(5) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here