ಪುತ್ತೂರು: 33ಕೆ.ವಿ ಕಾವು-ಸುಳ್ಯ ಏಕ ಪಥ ಮಾರ್ಗವನ್ನು ದ್ವಿ ಪಥ ಮಾರ್ಗವನ್ನಾಗಿ ಬದಲಾಯಿಸುವ ಕಾಮಗಾರಿಯ ಸಲುವಾಗಿ ಸೆ.24ರಂದು ಬೆಳಿಗ್ಗೆ 9:30ರಿಂದ ಸಂಜೆ 5:00ರವರೆಗೆ 33/11ಕೆವಿ ಕುಂಬ್ರ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮದ್ದ, ದೇರ್ಲ, ಇರ್ದೆ, ಪಾಣಾಜೆ ಮತ್ತು ಸುಳ್ಯಪದವು ಹಾಗೂ 33/11 ಕೆವಿ ಕಾವು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಈಶ್ವರಮಂಗಲ ಟೌನ್, ಕರ್ನೂರು ಹಾಗೂ ಕನಕಮಜಲು ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಈ ಮಾರ್ಗಗಳಲ್ಲಿರುವ ಪ್ರದೇಶದ ವಿದ್ಯುತ್ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.