ಸುದಾನ ಶಾಲೆಯಲ್ಲಿ ವೈಭವಯುತ ಓಣಂ ಹಬ್ಬ

0

puttur: ಸುದಾನ ವಸತಿಯುತ ಶಾಲೆಯಲ್ಲಿ ಓಣಂ ಹಬ್ಬವನ್ನು ಸುಂದರವಾದ ‘ಓಣಂ ಪೂಕಳಂ’ ಅನ್ನು ವಿನೂತನವಾಗಿ ರಚಿಸಿ ಅಲಂಕರಿಸುವುದರ ಮೂಲಕ ಸಡಗರದಿಂದ ಆಚರಿಸಲಾಯಿತು.

ಶಾಲಾ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಶಾಲಾ ಕಚೇರಿಯ ಮುಂದೆ ಹಾಕಲಾದ ಈ ಪೂಕಳಂ ಕೇರಳದ ಸುಂದರ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಿತು. ಸುದಾನ ಶಾಲೆಯ ಹಿರಿಯ ನಿವೃತ್ತ ಶಿಕ್ಷಕಿಯವರಾದ ಶ್ರೀಮತಿ. ತಾರಾ ಭಟ್ ರವರು ಪೂಕಳಂ ದೀಪ ಬೆಳಗಿದರು.ಚರಿಷ್ಮಾ (7ನೇ)ಓಣಂ ಮಲಯಾಳ ಹಾಡನ್ನು ಸುಮಧುರವಾಗಿ ಹಾಡಿದರು.

ಉಜ್ವಲ್ (9ನೇ) ಓಣಂ ಹಬ್ಬದ ಮಹತ್ವವನ್ನು ವಿವರಿಸುತ್ತಾ ಈ ಹಬ್ಬವು ಶ್ರೇಷ್ಠತೆ, ಸೌಹಾರ್ದತೆ ಮತ್ತು ಹೃದಯದ ಹಬ್ಬ ಎಂದು ಸವಿವರವಾಗಿ ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ. ಶೋಭಾ ನಾಗರಾಜ್ ಸರ್ವರಿಗೂ ಶುಭ ಹಾರೈಸಿದರು. 5 ರಿಂದ 7ನೇ ತರಗತಿಯ ಮಕ್ಕಳು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಹೂಗಳಿಂದ ವಿವಿಧ ವಿನ್ಯಾಸಗಳನ್ನು ರಚಿಸುವುದರ ಮೂಲಕ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ಶಿಕ್ಷಕ ವೃಂದದವರು ಓಣಂ ಉಡುಗೆ ತೊಡುಗೆಯಲ್ಲಿದ್ದು ಓಣಂ ವಿಶೇಷ ಕಾರ‍್ಯಕ್ರಮದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here