ಸೆ.29:ವಿಶ್ವ ಹೃದಯ ದಿನಾಚರಣೆಯಂಗವಾಗಿ ರೋಟರಿ ಕ್ಲಬ್ ಪುತ್ತೂರುನಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಪುತ್ತೂರು: ರೋಟರಿ ಅಂತರ್ರಾಷ್ಟ್ರೀಯ ಜಿಲ್ಲೆ 3181, ವಲಯ ಐದರ ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರುನಿಂದ ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಸೆ.29 ರಂದು ಪುತ್ತೂರು ಬೈಪಾಸ್ ರಸ್ತೆಯ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವು ಜರಗಲಿದೆ.


ಈ ಶಿಬಿರದಲ್ಲಿ ರಕ್ತ ವರ್ಗೀಕರಣ ಮತ್ತು ರಕ್ತದಾನ ಶಿಬಿರ, ಕಣ್ಣಿನ ಪರೀಕ್ಷೆ ಮತ್ತು ಚಿಕಿತ್ಸೆ-ಇದರಲ್ಲಿ ಕಣ್ಣಿನ ಕ್ಯಾಟ್ರಾಕ್ಟ್ ಶಸ್ತ್ರಚಿಕಿತ್ಸೆಯನ್ನು ಪುತ್ತೂರಿನ ರೋಟರಿ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುವುದು, ಕಿಡ್ನಿ ಸಂಬಂಧಪಟ್ಟ ಕಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಮಾಹಿತಿಯನ್ನು ನೀಡಲಾಗುವುದು, ಕಿಡ್ನಿ ಡಯಾಲಿಸಿಸ್ ಸಂಬಂಧಪಟ್ಟಂತೆ ಸಲಹೆ ಮತ್ತು ಮಾರ್ಗದರ್ಶನ ನೀಡಲಾಗುವುದು, ಬಾಯಿಯ ತಪಾಸಣೆ ಮತ್ತು ದಂತ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುವುದು, ಥೈರಾಯಿಡ್ ಪರೀಕ್ಷೆ ಮತ್ತು ಚಿಕಿತ್ಸೆ, ವೈದ್ಯಕೀಯ ತಪಾಸಣೆ ಇದರಲ್ಲಿ ಬಿಪಿ, ಸಕ್ಕರೆ ಖಾಯಿಲೆ, ಇಸಿಜಿ ಇತ್ಯಾದಿಗಳನ್ನು ಉಚಿತವಾಗಿ ಮಾಡಲಾಗುವುದು, ಶ್ವಾಸಕೋಶ ತಪಾಸಣೆ ಮತ್ತು ಮಾಹಿತಿ, ಹೋಮಿಯೋಪತಿ ಮತ್ತು ಆಯುರ್ವೇದಿಕ್ ಚಿಕಿತ್ಸೆ, ಸ್ತನ ಕ್ಯಾನ್ಸರ್ ಮತ್ತು ಮೂತ್ರಜನಕಾಂಗದ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಮುಂತಾದ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು.


ಶಿಬಿರದಲ್ಲಿ ಆಯುಷ್ಮಾನ್ ಕಾರ್ಡ್ ನೋಂದಾವಣೆಯನ್ನು ಮಾಡಲಾಗುವುದು. ನೋಂದಾವಣೆಗೆ ಬೇಕಾದ ದಾಖಲೆಗಳಾದ ರೇಶನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಫಲಾನುಭವಿಗಳು ತರತಕ್ಕದ್ದು ಎಂದು ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್(948378787), ಸಮುದಾಯ ಸೇವಾ ನಿರ್ದೇಶಕ ರಾಜ್ ಗೋಪಾಲ್(9448676090), ಕಾರ್ಯದರ್ಶಿ ದಾಮೋದರ್ ಕೆ(9449852909), ಕಾರ್ಯಕ್ರಮ ಸಂಯೋಜಕ ಉಮಾನಾಥ್ ಪಿ.ಬಿ(9845143838)ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಘಾಟನೆ..
ಶಿಬಿರದ ಉದ್ಘಾಟನೆಯನ್ನು ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ನೆರವೇರಿಸಲಿರುವರು. ಮುಖ್ಯ ಅತಿಥಿಯಾಗಿ ತಾಲೂಕು ಆರೋಗ್ಯ ಅಧಿಕಾರಿ ಡಾ.ದೀಪಕ್ ರೈರವರು ಭಾಗವಹಿಸಲಿರುವರು. ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್‌ರವರು ವಹಿಸಿಕೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here