ಮಾನವ ಮಾರಾಟ ಮತ್ತು ಕಳ್ಳ ಸಾಗಾಟ ಕುರಿತ ಜಾಗೃತಿ ಕಾರ್ಯಕ್ರಮ

0

ಪುತ್ತೂರು: ಮಂಗಳೂರು ಪಡಿ ಸಂಸ್ಥೆ ಮತ್ತು ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಇವರ ಸಹಕಾರದಲ್ಲಿ ಪೊಲೀಸ್ ಇಲಾಖೆ, ವಿವಿಧ ಇಲಾಖೆ ಮತ್ತು ಪುತ್ತೂರಿನ ಸಂಘಸಂಸ್ಥೆ ಸಹಭಾಗಿತ್ವದಲ್ಲಿ ಓಯಸ್ಸಿಸ್ ಬೆಂಗಳೂರು ಇವರಿಂದ ಮಾನವ ಮಾರಾಟ ಮತ್ತು ಕಳ್ಳ ಸಾಗಾಣಿಕೆ ವಿರುದ್ಧ ಜನಜಾಗೃತಿ ಕಾರ್ಯಕ್ರಮವು ನ.9ರಂದು ಕೆಎಸ್‌ಆರ್‌ಟಿಸಿ ಬಸ್ ನಿಲ್ಧಾಣದ ಬಳಿ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿದ ಅಡಿಷನಲ್ ಎಸ್.ಪಿ ಅನಿಲ್ ಕುಮಾರ್ ಬೂಮಾ ರೆಡ್ದಿ ಮಾತನಾಡಿ, ಇಂತಹಾ ಕಾರ್ಯಕ್ರಮ ಮಾಡುವುರಿಂದ ಜನರು ಸಮಾಜದಲ್ಲಿ ಆಗುವ ತಪ್ಪುಗಳನ್ನು ತಡೆಯಲು ಅನುಕೂಲವಾಗಲಿದೆ ಎಂದರು.


ಜನಜಾಗೃತಿ ವೇದಿಕೆಯ ಜಿಲ್ಲಾದ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ, ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರಗಳು ಇಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.


ಪುತ್ತೂರು ನಗರ ಠಾಣಾ ಇನ್ಸ್‌ಪೆಕ್ಟರ್ ಜಾನ್ಸನ್ ಡಿ ಸೋಜ, ಎಸ್.ಐ ಆಂಜನೇಯ ರೆಡ್ದಿ, ಮಹಿಳಾ ಠಾಣೆಯ ಎಸ್.ಐ ಸುನೀಲ್ ಕುಮಾರ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನ ಅಧ್ಯಕ್ಷ ಚಂದ್ರಹಾಸ ರೈ.ಬಿ, ಮಂಗಳೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಪ್ರೇಮಿ ಪೆರ್ನಾಂಡಿಸ್, ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷ ಯು. ಲೋಕೇಶ್ ಹೆಗ್ಡೆ, ಶಿಕ್ಷಣ ಸಂಪನ್ಮೂಲ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ನಯನ ರೈ, ರೊಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಉಲ್ಲಾಸ್ ಪೈ, ನ್ಯಾಯವಾದಿ ಶಾಹಿರಾ ಬಾನು, ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷ ತಾರನಾಥ ಗೌಡ ಬನ್ನೂರು, ಉಪಾಧ್ಯಕ್ಷ ಶಶಿಧರ ಸೀಟಿಗುಡ್ದೆ, ಪಡಿ ಎಡ್ವಕೇಟ್ ಕಸ್ತೂರಿ ಬೊಳ್ವಾರ್, ಅಮರ್ ಅಕ್ಬರ್ ಅಂತೋಣಿ ಸಂಘಟನೆಯ ರಝಾಕ್ ಬಪ್ಪಳಿಗೆ, ಪಡಿ ಸಂಸ್ಥೆಯ ನಿರ್ವಾಹಕ ನವೀನ್, ನಗರಸಭಾ ನಾಮ ನಿರ್ದೇಶಿತ ಸದಸ್ಯ ಶರೀಫ್ ಬಲ್ನಾಡ್, ಸಾಮಾಜಿಕ ಕಾರ್ಯಕರ್ತ ಅಶೋಕ್ ಬಪ್ಪಳಿಗೆ, ಕಾರ್ಯಕ್ರಮದ ಸಂಘಟಕ ಲೋಕೇಶ್ ಅಲುಂಬುಡ, ಸಂಪನ್ಮೂಲ ಕೇಂದ್ರದ ನ್ಯಾಯಾವಾದಿ ರಾಜೇಶ್ವರಿ, ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳು, ರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಸಂಪನ್ಮೂಲ ಕೇಂದ್ರದ ಅಧ್ಯಕ್ಷ ರಫೀಕ್ ದರ್ಬೆ ಸ್ವಾಗತಿಸಿ, ಕಾರ್ಯದರ್ಶಿ ಸುಮಂಗಳಾ ಶೆಣೈ ವಂದಿಸಿದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ನಿಕಟ ಪೂರ್ವ ಅಧ್ಯಕ್ಷೆ, ನ್ಯಾಯಾವಾದಿ ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಜಾಗೃತಿ ಕಾರ್ಯಕ್ರಮದ ತಂಡದಲ್ಲಿ ಸುಮಾರು 20 ವಿದ್ಯಾರ್ಥಿಗಳು ಬೀದಿ ನಾಟಕ ಮೂಲಕ ಜಾಗೃತಿ ಮೂಡಿಸಿದರು. ಬಳಿಕ ಬೈಕ್ ರ್‍ಯಾಲಿ ಮೂಲಕ ಹಲವು ವಿದೇಶಿಗರು ಆಗಮಿಸಿದ್ದರು.

LEAVE A REPLY

Please enter your comment!
Please enter your name here