





ಪುತ್ತೂರು: ವಿವಿಧ ಸಂಘಟನೆಗಳಲ್ಲಿ ಜವಾಬ್ದಾರಿ ನಿರ್ವಹಿಸಿ ರಾಜಕೀಯದಲ್ಲೂ ಸಕ್ರಿಯರಾಗಿರುವ ಯುವ ವಕೀಲ ಪ್ರಜ್ವಲ್ ಅವರು ಭಾರತೀಯ ಜನತಾ ಪಾರ್ಟಿಯ ಪುತ್ತೂರು ನಗರ ಮಂಡಲದ ಯುವಮೋರ್ಚಾಕ್ಕೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಇಂಟರ್ ನ್ಯಾಷನಲ್ ಲಾ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ವರ್ಷದ ಎಲ್.ಎಲ್.ಎಮ್ ಮಾಡುತ್ತಿದ್ದು, ಇದೀಗ ಯುವನಾಯಕರಾಗಿ ಪುತ್ತೂರಿನ ರಾಜಕೀಯ ವಲಯದಲ್ಲಿ ಗುರುತಿಸಿಕೊಳ್ಳಲು ಸಿದ್ದರಾಗಿದ್ದಾರೆ.












