ಜೆಡಿಎಸ್, ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಅದ್ದು ಪಡೀಲ್ ಅವರದ್ದೆನ್ನಲಾದ ಅಶ್ಲೀಲ ವಿಡಿಯೋ ವೈರಲ್ !

0

ಪುತ್ತೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಮತ್ತು ಸೋಶಿಯಲ್ ಮೀಡಿಯಾ ಬರಹದ ಮೂಲಕ ಸದಾ ಸುದ್ದಿಯಾಗುತ್ತಿರುವ ಬಪ್ಪಳಿಗೆ ನಿವಾಸಿ ಅದ್ದು ಪಡೀಲ್ ಅವರು ಮಸೀದಿಯೊಳಗಡೆ ವೀಡಿಯೋ‌ ಕಾಲ್ ಮೂಲಕ ಮಹಿಳೆಯೊಂದಿಗೆ ಮಾತನಾಡುತ್ತಾ ಅಶ್ಲೀಲವಾಗಿ ವರ್ತಿಸಿದ್ದಾರೆ ಎಂದು ಸಾಮಾಜಿಕ‌ ಜಾಲತಾಣದಲ್ಲಿ‌ ಸಂದೇಶ ರವಾನೆಯಾಗುತ್ತಿದೆ.
ವಿಡಿಯೋ ಕಾಲ್‌ನಲ್ಲಿ ಮಹಿಳೆಯೊಬ್ಬರು ನಗ್ನವಾಗಿರುವ ಮತ್ತು ಇತ್ತ ಕಡೆಯಿಂದ ನಗ್ನ ವಿಡಿಯೋ ನೋಡಿ ವ್ಯಕ್ತಿಯೊಬ್ಬರು ಸೂಪರ್ ಎಂದು ಹೇಳುವ ವಾಯ್ಸ್ ವೈರಲ್ ಆಗುತ್ತಿದ್ದು ಈ ವಿಡಿಯೋದಲ್ಲಿರುವ ವ್ಯಕ್ತಿ ಈ ಹಿಂದೆ ಜೆಡಿಎಸ್‌ನಲ್ಲಿ ಮತ್ತು ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಪುತ್ತೂರು ಬಪ್ಪಳಿಗೆ ನಿವಾಸಿ ಅದ್ದು ಪಡೀಲ್ ಎಂದು ಹೇಳಲಾಗುತ್ತಿದೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣ ಹಾಗೂ ವೆಬ್ ಮಾಧ್ಯಮದಲ್ಲಿ ವ್ಯಾಪಕ ಸುದ್ದಿಯಾಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಚಿತ್ರ ನನ್ನದಲ್ಲ- ಕಾನೂನು ಮೂಲಕ ಹೋರಾಡುತ್ತೇನೆ- ಅದ್ದು ಪಡೀಲ್:
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಚಿತ್ರ ನನ್ನದಲ್ಲ. ಕುಹಕಿಗಳೇ ನಿಮಗೆ ನನ್ನ ಬೆತ್ತಲೆ ದೇಹ ಬೇಕಾದರೆ ಬನ್ನಿ ನಾನು ತೋರಿಸುತ್ತೇನೆ ಯಾರದ್ದೋ ತಲೆ ಯಾರದ್ದೋ ಬೆತ್ತಲೆ ದೇಹ ಹಾಕಿ ಮಾನ ತೆಗೆದರೆ ನಾಲಾಯಕ್ ಸ್ವಯಂ ಘೋಷಿತ ನಾಯಕನ ಮೂರು ತಿಂಗಳ ಎಪಿಸೋಡ್ ನಿಲ್ಲಿಸುತ್ತೇನಾ. ಖಂಡಿತವಾಗಿಯೂ ನಿಲ್ಲಲ್ಲ. ತಲೆ ಕತ್ತರಿಸಿ ಅಂಟಿಸಿದರೆ ನಾನೇನು ಮರ್ಯಾದೆ ಕಳಕೊಳ್ಳಲ್ಲ ಮೂರ್ಖ ಶಿಖಾಮಣಿ. ನಿನ್ನ ಜೊತೆ ಮತ್ತೊಬ್ಬ ಜಂಭ ಕೊಚ್ಚಿಕೊಳ್ಳುವ ಅಹಂಕಾರಿ ಇರುವ ಬಗ್ಗೆಯೂ ನನಗೆ ಗೊತ್ತಿದೆ. ಈ ಬೆತ್ತಲೆ ದೇಹದ ಮಾಸ್ಟರ್ ಮೈಂಡ್ ಅವನು ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಹಾಕಲು ಹಿಂಜರಿದು ನಿನ್ನೆ ನಿನ್ನ ಕೈಗೆ ಕೊಟ್ಟಿರುವ ವಿಷಯವೂ ನನಗೆ ಗೊತ್ತಿದೆ. ಆದರೆ ನನ್ನ ಒಂದು ರೋಮವನ್ನೂ ನಿಮಗಿಬ್ಬರಿಗೆ ಕಿಸಿಯಲು ಆಗಲ್ಲ.
ನೀನು ಮಾತುಕತೆಗೆ ಕಳಿಸಿದ ಕೆಲವರಿಗೆ ನಾನು ಒಪ್ಪಲ್ಲ ಎಂದು ಖಡಾಖಂಡಿತವಾಗಿ ಹೇಳಿದ ಕಾರಣವಲ್ಲವೇ ಇಂದು ಬೆತ್ತಲೆ ದೇಹಕ್ಕೆ ನನ್ನ ತಲೆ ಅಂಟಿಸಿ ಹಾಕಿದ್ದಿ. ಇದರ ಪರಿಣಾಮ ಅತೀ ಘೋರವಾಗಲಿದೆ. ನೀನು ಮತ್ತು ನಿನ್ನ ಅಹಂಕಾರಿಯೊಬ್ಬ ಅನುಭವಿಸಲು ರೆಡಿಯಾಗಿರು.
ತಲೆ ಹೋದರೂ ಬಿಡಲ್ಲ. ಕಾನೂನು ಮುಖಾಂತರ ಹೋರಾಟ ಮಾಡಿಯೇ ಮಾಡುತ್ತೇನೆ. ಎಲ್ಲಾ ಗ್ರೂಪಿಗೂ ಹಾಕು ಎಂದು ಅದ್ದು ಪಡೀಲ್ ಅವರು ಶಾಸಕರು ಪುತ್ತೂರು ಎಂಬ ವಾಟ್ಸಾಪ್ ಗ್ರೂಪ್‌ಗೆ ಸ್ಪಷ್ಟನೆ ಹಾಕಿ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here