ಆಕಾಶದೆತ್ತರಕ್ಕೆ ಹಾರಲು ಇಚ್ಚಿಸುವ ಯುವ ಸಮೂಹಕ್ಕೆ ರೆಕ್ಕೆ ಕಟ್ಟಿಕೊಡಲಿದೆ ‘ಶ್ರೀಪ್ರಗತಿ ವಿಸ್ತಾರ ಎವಿಯೇಷನ್ ಕಾಲೇಜ್’ – ಅ.3ರಂದು ಉದ್ಘಾಟನೆ

0

ಪುತ್ತೂರು:ಶ್ರೀಪ್ರಗತಿ ವಿಸ್ತಾರ ಕಾಲೇಜ್ ಫಾರ್ ಎವಿಯೇಷನ್ ಆ್ಯಂಡ್ ಮ್ಯಾನೇಜ್‌ಮೆಂಟ್ ಅ.3 ರಂದು ಪುತ್ತೂರು ನಗರದ ಎಪಿಎಂಸಿ ರಸ್ತೆಯಲ್ಲಿರುವ ಮಾನೈ ಕಟ್ಟಡದಲ್ಲಿ ಆರಂಭಗೊಳ್ಳಲಿದೆ ಎಂದು ಸಂಸ್ಧೆಯ ಅಧ್ಯಕ್ಷೆ ಹೇಮಾಂಬಿಕ ಸುದರ್ಶನ್, ಉಪಾಧ್ಯಕ್ಷೆ ಹೇಮಲತಾ ಗೋಕುಲ್‌ನಾಥ್, ಕಾರ್ಯದರ್ಶೀ ಗೋಕುಲ್‌ನಾಥ್ ಪಿವಿ ಮತ್ತು ಕೋಶಾಧಿಕಾರಿ ಸುದರ್ಶನ್ ಮೂಡಬಿದ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐಎಟಿಎ ಯಲ್ಲಿ ನೋಂದಾಯಿತ ಸಂಸ್ಧೆಯಾಗಿರುವ ಬೆಂಗಳೂರಿನ ಸ್ಕೈ ಬರ್ಡ್ ಎವಿಯೇಷನ್ ಸಂಸ್ಧೆಯ ಅಧಿಕೃತ ಪ್ರಾಂಚೈಸಿ ಸಂಸ್ಧೆಯಾಗಿರುವ ಶ್ರೀಪ್ರಗತಿ ವಿಸ್ತಾರ ಎವಿಯೇಷನ್ ಕಾಲೇಜು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ವಿಮಾನಯಾನ ತರಬೇತಿಗೆ ಬೇಕಾದ ‘ಮಾಕ್’ ವಿಮಾನ ಕ್ಲಾಸ್ ರೂಂ ಸೇರಿದಂತೆ ಇನ್ನಿತರ ಎಲ್ಲಾ ಸೌಲಭ್ಯವನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ಅನುಭವ ಪಡೆದಿರುವ ನುರಿತ ಅದ್ಯಾಪಕ ವೃಂದ ತರಬೇತಿ ನೀಡಲಿದ್ದು, ಆಕಾಶದೆತ್ತರಕ್ಕೆ ಹಾರಲು ಇಚ್ಚಿಸುವ ಯುವ ಸಮೂಹಕ್ಕೆ ರೆಕ್ಕೆಗಳನ್ನ ಕಟ್ಟಿಕೊಡಲಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶಿಸ್ತು ಬದ್ಧವಾಗಿ ಆಸಕ್ತಿ ಇರುವ ವಿಭಾಗದಲ್ಲಿ ಪರಿಣಿತರನ್ನಾಗಿ ಮಾಡುವ ಮೂಲಕ ವಿಮಾನಯಾನ ಕ್ಷೇತ್ರದಲ್ಲಿ ಲಭ್ಯವಿರುವ ಅವಕಾಶಗಳಿಗೆ ತನ್ನ ಅಭ್ಯರ್ಥಿಗಳನ್ನು ಶ್ರೀಪ್ರಗತಿ ವಿಸ್ತಾರ ಪರಿಚಯಿಸಲಿದೆ.

ವಿಮಾನಯಾನ ಸಂಸ್ಧೆಗಳಲ್ಲಿ ಹಾರಾಟ ಮಾತ್ರವಲ್ಲದೆ ವಿಫುಲ ಉದ್ಯೋಗಾವಕಾಶಗಳಿವೆ ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ. ಎರೋನಾಟಿಕಲ್ ಕ್ಷೇತ್ರ ಬೆಳೆದಂತೆ ಎವಿಯೇಷನ್ ಕ್ಷೇತ್ರವು ಬೆಳೆಯುತ್ತಾ ಬಂದಿದೆ. ಸಾರಿಗೆ ವ್ಯವಸ್ಧೆಯಲ್ಲಿ ಅತ್ಯಂತ ಪ್ರತಿಷ್ಠಿತ ಮತ್ತು ಅತೀ ವೇಗದ ಸಾಧನವಾಗಿರುವ ವಿಮಾನಯಾನ ಎಂದರೆ ವಿಮಾನಗಳ ಹಾರಾಟ, ಅಪರೇಶನ್, ಬಳಕೆ, ನಿರ್ವಹಣೆ ಮತ್ತು ನಿಯಂತ್ರಣವಾಗಿದ್ದು ಈಗ ಈ ಕ್ಷೇತ್ರ ಬಹಳಷ್ಟು ವಿಸ್ತಾರಗೊಂಡು ಹಲವು ಉದ್ಯೋಗಾವಕಾಶಗಳನ್ನು ತೆರೆದಿಟ್ಟಿದೆ.
ಕೇಂದ್ರ ಸರ್ಕಾರ ಉಡಾನ್ ಯೋಜನೆಯನ್ನು ಜಾರಿಗೊಳಸಿದ ಬಳಿಕ ಎವಿಯೇಷನ್ ಕ್ಷೇತ್ರ ಬಹಳಷ್ಟು ವಿಸ್ತಾರಗೊಂಡಿದೆ ಎಂದೇ ಹೇಳಬಹುದು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಮಾನಯಾನ ಸಂಸ್ಧೆಗಳಲ್ಲಿ ಉದ್ಯೋಗದ ಅವಕಾಶಗಳು ಹೆಚ್ಚಾಗಿದ್ದು ನಿರುದ್ಯೋಗ ಪ್ರಮಾಣ ಒಂದಿಷ್ಟು ಕಡಿಮೆಯಾಗುವಲ್ಲಿ ಸಹಕಾರಿಯಾಗಿದೆ.

ವಿಮಾನಯಾನ ಕ್ಷೇತ್ರದಲ್ಲಿ ಆಡಳಿತ, ಲೆಕ್ಕಪತ್ರ, ಮಾನವಸಂಪನ್ಮೂಲ, ಅತಿಥಿ ಸತ್ಕಾರ, ಗಗನಸಖಿ, ಟಿಕೆಟ್ ಬುಕ್ಕಿಂಗ್, ಟಿಕೆಟ್ ತಪಾಸಣೆ, ಬೋರ್ಡಿಂಗ್ ಪಾಸ್, ಲಗೇಜ್ ನಿರ್ವಹಣೆ, ಪ್ರಯಾಣಿಕರ ಸುರಕ್ಷೆ, ಪ್ರಯಾಣಿಕರಿಗೆ ಮಾಹಿತಿ, ನೆರವು, ತುರ್ತುಸೇವೆ, ಇನ್‌ ಪ್ಲೈಟ್ ಆಹಾರ ಪಾನೀಯ ವ್ಯವಸ್ಧೆ, ಹೋಟೆಲ್ ವ್ಯವಸ್ಧೆ, ಕಾರ್ಗೋ ನಿರ್ವಹಣೆ ಹೀಗೆ ಹಲವಾರು ವಿಭಾಗದಲ್ಲಿ ಉದ್ಯೋಗಾವಕಾಶವಿದ್ದು, ಪುತ್ತೂರಿನಲ್ಲಿ ಆರಂಭಗೊಳ್ಳಲಿರುವ ಶ್ರೀಪ್ರಗತಿ ವಿಸ್ತಾರ ಎವಿಯೇಷನ್ ಕಾಲೇಜ್ ಯುವಕ ಯುವತಿಯರ ಪಾಲಿಗೆ ಹೊಸ ಬೆಳಕು ಹರಿಸಲಿದೆ. ಹಿಂದಿಗಂತಲೂ ಹೆಚ್ಚು ವಿಸ್ತಾರವಾಗಿರುವ ವಿಮಾನಯಾನ ಕ್ಷೇತ್ರದ ಬೇಡಿಕೆಗೆ ತಕ್ಕಂತೆ ಒಂದೊಂದು ವಿಷಯಕ್ಕೆ ಸಂಬಂಧಿಸಿದಂತೆ ಸರ್ಟಿಫಿಕೇಟ್, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ ಕೋರ್ಸ್ಗಳನ್ನು ಶ್ರೀಪ್ರಗತಿ ವಿಸ್ತಾರ ಪರಿಚಯಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಅ.3ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಲಿದ್ದು, ವಿದ್ಯಾರ್ಥಿಗಳು ಮತ್ತು ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here