ಪುತ್ತೂರು: ವಿಶ್ವ ಹೃದಯ ದಿನದ ಪ್ರಯುಕ್ತ ಕಲ್ಲಾರೆ ಡಾ.ನಝೀರ್ ಅಹಮದ್ ಕ್ಲಿನಿಕ್ ನಲ್ಲಿ ಉಚಿತ ಕೊಲೆಸ್ಟ್ರಾಲ್, ಅಪೋ ಲಿಪೊಪ್ರೋಟೀನ್, ಬ್ಲಡ್ ಶುಗರ್, HBA1C, ಫ್ಯಾಟಿ ಲಿವರ್ ನ ತೀವ್ರತೆಯನ್ನು ಅಳೆಯುವ FIB 4 score, ಇಸಿಜಿ ತಪಾಸಣೆಯನ್ನು ನಡೆಸಲಾಯಿತು.
ಫಲಾನುಭವಿಗಳಿಗೆ ಡಾ.ನಝೀರ್ಸ್ ಡಯಾಬಿಟಿಸ್ ಸೆಂಟರ್ ನ ವೈದ್ಯ ಡಾ.ನಝೀರ್ ಅಹಮದ್ ರವರು ಸೂಕ್ತ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ದಾಮೋದರ್ ಕೆ, ಸದಸ್ಯ ಶ್ರೀಧರ್ ಗೌಡ ಕಣಜಾಲು, ಯು.ಎಸ್.ವಿ ಕಂಪನಿಯ ಚೇತನ್ ಕುಮಾರ್, ಅಲ್ಕೆಮ್ ಕಂಪನಿಯ ಭೀಮು, ಟೊರೆಂಟ್ ಕಂಪನಿಯ ಕೃಷ್ಣ ರೆಡ್ ಕ್ಲಿಫ್ ಲ್ಯಾಬ್ ಸಿಬ್ಬಂದಿಗಳು, ಡಾ.ನಝೀರ್ ಡಯಾಬಿಟಿಸ್ ಸೆಂಟರ್ ಸಿಬ್ಬಂದಿಗಳು ಸಹಕರಿಸಿದರು.
ಭಾಗವಹಿಸಿದ ಫಲಾನುಭವಿಗಳು..
*ಕೊಲೆಸ್ಟ್ರಾಲ್- 55 ಮಂದಿ
*ಇಸಿಜಿ-26 ಮಂದಿ
*ಫ್ಯಾಟಿ ಲಿವರ್ ಮತ್ತು ಅಪೋ ಲಿಪೊಪ್ರೊಟೀನ್- 40 ಮಂದಿ
*HBA1C- 36 ಮಂದಿ
*ಬ್ಲಡ್ ಶುಗರ್- 60 ಮಂದಿ