ಪುತ್ತೂರು: ಅಗ್ನಿಪಥ್ ನೇಮಕಾತಿಯಲ್ಲಿ ಅಗ್ನಿವೀರ್ ಆಗಿ ಭಾರತೀಯ ಸೇನೆಗೆ ಆಯ್ಕೆಯಾದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕ ಸಂಘಟನೆಯ ಸದಸ್ಯ ವಿಜೇತ್ ಮಜ್ಜಾರ್ರವರಿಗೆ ಸಂಘಟನೆಯ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಅರಿಯಡ್ಕ ಗ್ರಾಮದ ಮಜ್ಜಾರಡ್ಕ ಪದ್ಮನಾಭ ಮತ್ತು ಯಶೋಧ ಇವರ ದ್ವಿತೀಯ ಪುತ್ರರಾಗಿರುವ ಇವರು 2024 ನೇ ಸಾಲಿನ ಅಗ್ನಿಪಥ್ ನೇಮಕಾತಿಯಲ್ಲಿ ಆಯ್ಕೆಯಾಗಿದ್ದಾರೆ.
ಸಂಘಟನೆಯ ಗೌರವ ಸಲಹೆಗಾರರದ ಮೋಹನ್ ದಾಸ್ ರೈ, ಮನೋಜ್ ರೈ ಮಾಡಾವು, ವಿಷ್ಣು ಯುವಶಕ್ತಿ ಮಕ್ಕಳ ಕುಣಿತ ಭಜನಾ ತಂಡದ ಗೌರವ ಅಧ್ಯಕ್ಷ ಅಜಿತ್ ರೈ ದೇರ್ಲ, ಒಳಮೊಗ್ರು ಪಂಚಾಯತ್ ಸದಸ್ಯೆ ಚಿತ್ರ ಬಿ.ಸಿ, ಅರಿಯಡ್ಕ ಬಿಜೆಪಿ 4ನೇ ವಾರ್ಡ್ ಅಧ್ಯಕ್ಷ ಯುವರಾಜ್ ಪೂಂಜಾ, ಸಂಘಟನೆ ನಿಯೋಜಿತ ಉಪಾಧ್ಯಕ್ಷ ಸಮಿತ್ ಮಜ್ಜಾರ್, ನಿಯೋಜಿತ ಪ್ರಧಾನ ಕಾರ್ಯದರ್ಶಿ ಯತೀಶ್ ಕಠಾರ, ಬೆಳ್ಳಿಪಾಡಿ, ಸಂಘಟನೆಯ ಸಂಘಟಕರಾದ ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ರಾಜೇಶ್ ಕೆ ಮಯೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜೇತ್ ಅವರ ತಾಯಿ ಯಶೋದ ಮಜ್ಜಾರ್ರವರು ಮಗನ ಸಾಧನೆಯ ಬಗ್ಗೆ ಮನದಾಳದ ಮಾತುಗಳನ್ನು ಹಾಡಿ, ಸನ್ಮಾನಿಸಿದ ಸಂಘಟನೆಗೆ ಧನ್ಯವಾದಗಳನ್ನು ಅರ್ಪಿಸಿದರು. ಸಂಘಟನೆಯ ಸದಸ್ಯರಾಗಿ ಸೇನೆಗೆ ಆಯ್ಕೆಯಾಗಿರುವ ವಿಚಾರ ಸಂಘಟನೆಗೆ ಹೆಮ್ಮೆ ತಂದಿದೆ ಎಂದು ಹೇಳಿ ಗಣ್ಯರು ಶುಭ ಹಾರೈಸಿದರು. ಸಂಘಟನೆಯ ಪ್ರದಾನ ಕಾರ್ಯದರ್ಶಿ ಭರತ್ ಓಲ್ತಾಜೆ ಕಾರ್ಯಕ್ರಮ ನಿರೂಪಿಸಿದರು.
“ನನಗೆ ತರಬೇತಿ ಕೊಟ್ಟು ನನ್ನ ಸಾಧನೆಗೆ ಕಾರಣೀಕರ್ತರಾದ ಮಂಗಳೂರಿನ ರಾಣಿ ಅಬ್ಬಕ್ಕ ಸೇನಾ ತರಬೇತಿ ಶಾಲೆಯ ತರಬೇತುದಾರ ದಾಸಪ್ಪ ಪೂಜಾರಿಯವರಿಗೆ ಹಾಗೂ ಈ ಶಾಲೆಯ ಮಾಹಿತಿ ಕೊಟ್ಟು ಪ್ರೋತ್ಸಾಹ ನೀಡಿದ ಒಳಮೋಗ್ರು ಗ್ರಾಪಂ ಸದಸ್ಯೆ ಚಿತ್ರ ಬಿ.ಸಿಯವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನನ್ನು ಗುರುತಿಸಿ, ಸನ್ಮಾನ ಮಾಡಿದ ಮಜ್ಜಾರಡ್ಕ ವಿಷ್ಣು ಯುವಶಕ್ತಿ ಬಳಗಕ್ಕೆ ಅಬಾರಿಯಾಗಿದ್ದೇನೆ’ ಎಂದು ವಿಜೇತ್ ಮಜ್ಜಾರ್ ರವರು ಈ ಸಂದರ್ಭದಲ್ಲಿ ತನ್ನ ಮನದಾಳದ ಮಾತುಗಳನ್ನಾಡಿದರು.