ಅ.3ರಿಂದ ಕೆದಿಲ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಸಂಭ್ರಮ

0

ಪುತ್ತೂರು: ಕೆದಿಲ ಗ್ರಾಮದ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ಅ.3ರಿಂದ ಪ್ರಾರಂಭಗೊಂಡು ಅ.12ರ ತನಕ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಅನುಗ್ರಹದೊಂದಿಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮಿಸಲಿದೆ.
ಅ.3ರಂದು ಬೆಳಿಗ್ಗೆ ನಿತ್ಯಪೂಜೆ, ಗಣಪತಿ ಹೋಮದೊಂದಿಗೆ ನವರಾತ್ರಿ ಉತ್ಸವಗಳಿಗೆ ಚಾಲನೆ ದೊರೆಯಲಿದೆ. ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಬೆಳಿಗ್ಗೆ ನಿತ್ಯಪೂಜೆ, ಮಂಗಳಾರತಿ, ಚಂಡಿಕಾಹೋಮ, ಮಧ್ಯಾಹ್ನ ಸರ್ವಾಲಂಕಾರ ಪೂಜೆ, ಸರ್ವಸೇವೆ, ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಶ್ರೀದುರ್ಗಾ ನಮಸ್ಕಾರಪೂಜೆ, ರಂಗಪೂಜೆ, ರಾತ್ರಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.

ನವರಾತ್ರಿ ಉತ್ಸವದಲ್ಲಿ ಅ.3ರಂದು ವಿಶೇಷವಾಗಿ ಶ್ರೀವನದುಗಾ ಹವನ ನಡೆಯಲಿದೆ. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಗಣಪತಿ ಹವನ, ಶ್ರೀ ವನದುರ್ಗಾ ಹವನ ಪ್ರಾರಂಭ, ಮಧ್ಯಾಹ್ನ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅ.7ರಂದು ಲಲಿತಾ ಪಂಚಮಿ, ಅ.11ರಂದು ದುರ್ಗಾಷ್ಟಮಿ, ಅ.12ರಂದು ಮಹಾನವಮಿ, ಆಯುಧ ಪೂಜೆ, ವಾಹನ ಪೂಜೆ, ವಿಜಯದಶಮಿ, ವಿದ್ಯಾರಂಭಗಳು ನಡೆಯಲಿದೆ.


ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು:
ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಸಂಜೆ 6ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಅ.3ರಂದು ಯಕ್ಷಕೂಟ ಬಡೆಕ್ಕಿಲ ಇವರಿಂದ ತಾಳಮದ್ದಳೆ, ಅ.4ರಂದು ಶ್ರೀಸತ್ಯಸಾಯಿ ಸೇವಾ ಸಮಿತಿಯವರಿಂದ ಭಜನೆ, ಅ.5ರಂದು ಬೆಳಿಗ್ಗೆ ಕೆದಿಲ ಶ್ರೀಧೂಮಾವತಿ ಭಜನಾ ಮಂಡಳಿ, ನಂತರ ಮಾಣಿ ಶ್ರೀ ಬ್ರಾಹ್ಮರಿ ಬಂಟ ಭಜನಾ ಮಂಡಳಿ, ಸಂಜೆ ಪೆರಾಜೆ ಶ್ರೀದೇವಿ ಚಿನ್ನರ ಕುಣಿತ ಭಜನಾ ಮಂಡಳಿಯವರಿಂದ ಭಜನೆ, ಅ.6ರಂದು ಬೆಳಿಗ್ಗೆ ಕರಿಮಜಲು ಶ್ರೀಕೃಷ್ಣ ಭಜನಾ ಮಂಡಳಿ, ನಂತರ ಕೆದಿಲ ಸಾಕೇತನಗರ ಶ್ರೀರಾಮ ಭಜನಾ ಮಂಡಳಿಯವರಿಂದ ಭಜನೆ, ಸಂಜೆ ನೆಹರುನಗರದ ವಿದುಷಿ ವೀಣಾ ರಾಘವೇಂದ್ರ ಶಿಷ್ಟಯರಿಂದ ಶಾಸ್ತ್ರೀಯ ಸಂಗೀತ, ಅ.7ರಂದು ಅನನ್ಯ ಪಿ.ಎಸ್ ಇವರಿಂದ ಶಾಸ್ತ್ರೀಯ ಸಂಗೀತ, ಅ.8ರಂದು ಪ್ರಸನ್ನ ಭಟ್ ಬಾಳ್ಕಲ್ ಮತ್ತು ಬಳಗದವರಿಂದ ಯಕ್ಷ-ಗಾನ-ವೈಭವ, ಅ.9ರಂದು ಮಾಣಿಲ ಅರವಿಂದ ಆಚಾರ್ಯ ಬಳಗದವರಿಂದ ಭಜನ್ ಸಂಧ್ಯಾ, ಅ.10ರಂದು ಕುಂದಾಪುರ ಹಾಲಾಡಿ ಶ್ರೀಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯವರಿಂದ ಶಿವಶಕ್ತಿ ಗುಳಿಗ ಯಕ್ಷಗಾನ ಬಯಲಾಟ, ಅ.11ರಂದು ವಿದುಷಿ ಅನುಶ್ರೀ ಭಟ್ ಬೆಂಗಳೂರು, ವಿದುಷಿ ದೀಪ ಭಟ್‌ರವರ ಶಿಷ್ಯರಿಂದ ಭರತನಾಟ್ಯ, ಅ.12ರಂದು ವಿಟ್ಲ ಯಕ್ಷಭಾರತ ಸೇವಾ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಶಾಂಭವಿ ವಿಲಾಸ ಯಕ್ಷಗಾನ ನಡೆಯಲಿದೆ ಎಂದು ಶ್ರೀ ವನದುರ್ಗಾ ಸೇವಾ ಟ್ರಸ್ಟ್ನ ಆಡಳಿತ ನಿರ್ದೇಶಕ ಜೆ.ಸುಂದರ ಭಟ್ ಹಾಗೂ ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ರಘು ಅಜಿಲ ಮಿತ್ತಿಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here