ಪುತ್ತೂರು ಬೊಳುವಾರಿನಿಂದ ದರ್ಬೆಯ ತನಕ ಮೆರವಣಿಗೆ
ಪುತ್ತೂರು: ಕರ್ನಾಟಕ ಸುವರ್ಣ ಸಂಭ್ರಮ ಆಚರಣೆಯ ಪ್ರಯುಕ್ತ ’ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ’ ಎಂಬ ಅಭಿಯಾನದ ಅಂಗವಾಗಿ ರಾಜ್ಯಾದ್ಯಂತ ನಡೆಯುತ್ತಿರುವ ’ಕನ್ನಡ ಜ್ಯೋತಿ ರಥಯಾತ್ರೆ’ ಯು ಅ.1ರಂದು ಪುತ್ತೂರಿಗೆ ಆಗಮಿಸಿದ ವೇಳೆ ಕನಕಮಜಲುವಿನಲ್ಲಿ ಪುತ್ತೂರು ತಾಲೂಕು ಆಡಳಿತ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸ್ವಾಗತಿಸಲಾಯಿತು.
ಪುತ್ತೂರು ತಾಲೂಕು ಆಡಳಿತ ಸೌಧದ ಬಳಿ ಕನ್ನಡ ಭುವನೇಶ್ವರಿಗೆ ಸಹಾಯಕ ಕಮೀಷನರ್ ಜುಬಿನ್ ಮೊಹಪಾತ್ರ ಸಹಿತ ಎಲ್ಲರು ಪುಷ್ಪಾರ್ಚನೆ ಮಾಡಿದರು. ಬಳಿಕ ಬೊಳುವಾರಿನಿಂದ ಗಾಂಧಿಕಟ್ಟೆ ಅಲ್ಲಿಂದ ದರ್ಬೆಯ ತನಕ ಜಾನಪದ ಪ್ರದರ್ಶನದೊಂದಿಗೆ ಮೆರವಣಿಗೆ ನಡೆಯಿತು.
ಈ ಸಂದರ್ಭ ಎನ್‌ಡಿಆರ್‌ಎಫ್‌ನ ಚೀಫ್ ಕಮಾಂಡೆಂಟ್ ಅಖಿಲೇಶ್, ಚೀಫ್ ಡೆಪ್ಯೂಟಿ ಕಮಾಂಡೆಂಟ್ ಶಾಂತಿಲಾಲ್ ಚಟಿಯಾ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕೋಶಾಧ್ಯಕ್ಷ ಬಿ.ಐತ್ತಪ್ಪ ನಾಯ್ಕ್, ತಾಲೂಕು ಪಂಚಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ನಗರಸಭೆ ಸಮುದಾಯ ಸಂಘಟಕ ಕರುಣಾಕರ ವಿ, ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ವೇತಾ ಕಿರಣ್, ವರಲಕ್ಷ್ಮೀ, ರಾಮಚಂದ್ರ, ಉಪತಹಶೀಲ್ದಾರ್ ಸುಲೋಚನಾ, ಕಂದಾಯ ನಿರೀಕ್ಷಕ ದಯಾನಂದ್, ಗೋಪಾಲ್, ನಗರಸಭಾ ಸದಸ್ಯ ಯೂಸೂಫ್ ಡ್ರೀಮ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.