ಪುತ್ತೂರು: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ದರ್ಬೆ ಶಾಖೆ ಸೇರಿದಂತೆ ವಿವಿಧ ಶಾಖೆಗಳಲ್ಲಿ ಅಟೆಂಡರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ರಾಮಣ್ಣ ನಾಯ್ಕರವರಿಗೆ ಬೀಳ್ಕೊಡುಗೆ ಸಮಾರಂಭವು ಸೆ.29ರಂದು ಬ್ಯಾಂಕಿನ ದರ್ಬೆ ಶಾಖೆಯಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿದ್ದ ಬ್ಯಾಂಕಿನ ನಿರ್ದೇಶಕ ಎಸ್.ಬಿ.ಜಯರಾಮ ರೈ ಮಾತನಾಡಿ, ರಾಮಣ್ಣ ನಾಯ್ಕರವರು ತನ್ನ ಕರ್ತವ್ಯವನ್ನು ಸಂಬಳಕ್ಕೋಸ್ಕರ ಮಾಡದೆ ನಿಷ್ಠೆ ಹಾಗೂ ಭಕ್ತಿಯಿಂದ ನಿರ್ವಹಿಸಿದ್ದಾರೆ. ಬಹಳ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಟ್ಟಡದ ಮಾಲಕರೂ, ಪುತ್ತೂರು ತಾಲೂಕು ಕನ್ನಡ ಪರಿಷತ್‌ನ ಅಧ್ಯಕ್ಷರಾಗಿರುವ ಉಮೇಶ್ ನಾಯಕ್ ಮಾತನಾಡಿ, ಗ್ರಾಹಕರೊಂದಿಗೆ ನಗು ಮುಖದೊಂದಿಗೆ ಸೇವೆ ನೀಡುತ್ತಿದ್ದ ರಾಮಣ್ಣ ನಾಯ್ಕರ ನಿವೃತ್ತ ಜೀವನವು ನಗುವಿನಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಬ್ಯಾಂಕಿನ ಹಿರಿಯ ಶಾಖಾ ನಿರೀಕ್ಷಕರಾದ ನಟರಾಜನ್, ಈಶ್ವರಮಂಗಲ ಶಾಖಾ ವ್ಯವಸ್ಥಾಪಕರಾದ ದಾಮೋದರ ಬಿ.ಎಂ., ಬಂಟಸಿರಿ ಸಹಕಾರಿ ಸಂಘದ ವ್ಯವಸ್ಥಾಪಕ ಸತೀಶ್ ರೈ ನಡುಬೈಲು, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ವ್ಯವಸ್ಥಾಪಕ ವಸಂತ ಜಾಲಾಡಿ, ನರಿಮೊಗರು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಧುಕರ್ ಹೆಚ್. ನಿವೃತ್ತರಿಗೆ ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿದ ರಾಮಣ್ಣ ನಾಯ್ಕ ಮಾತನಾಡಿ, ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಬ್ಯಾಂಕಿನ ಅಧ್ಯಕ್ಷರಿಗೆ, ಮಾರ್ಗದರ್ಶನ ನೀಡಿದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನವೀನ್ ಎಸ್, ಮೇಲ್ವಿಚಾರಕರಾದ ವಸಂತ ಎಸ್., ಶರತ್ ಡಿ., ಪುತ್ತೂರು ಮುಖ್ಯ ರಸ್ತೆ ಶಾಖಾ ವ್ಯವಸ್ಥಾಪಕಿ ಜಲಜಾಕ್ಷಿ, ಉಪ್ಪಿನಂಗಡಿ ಶಾಖಾ ವ್ಯವಸ್ಥಾಪಕಿ ಸಂಧ್ಯಾ, ಕಬಕ ಶಾಖಾ ವ್ಯವಸ್ಥಾಪಕ ಸೀತಾರಾಮ ಗೌಡ, ಬ್ಯಾಂಕಿನ ಪೆನಲ್ ಇಂಜಿನಿಯರ್ ಹರಿಪ್ರಸಾದ್ ರೈ, ಬ್ಯಾಂಕಿನ ಸಿಬ್ಬಂದಿಗಳಾದ ವಿಜಯಲಕ್ಷ್ಮಿ, ವಿಘ್ನೇಶ್, ಕೃಷ್ಣ ನಾಯ್ಕ, ನವೋದಯ ಗ್ರಾಮ ವಿಕಾಸ ಟ್ರಸ್ಟ್‌ನ ಪ್ರೇರಕರಾದ ಮೋಹಿನಿ, ಕುಸುಮಾವತಿ, ಜಯಂತಿ, ಮಮತಾ ಹಾಗೂ ಬ್ಯಾಂಕಿನ ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ದರ್ಬೆ ಶಾಖಾ ವ್ಯವಸ್ಥಾಪಕ ಕೇಶವ ಕುಮಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿಶ್ವನಾಥ ನಾಯ್ಕ ವಂದಿಸಿದರು. ಉಮೇಶ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕಿನ ಸಿಬ್ಬಂದಿಗಳಾದ ದಿವ್ಯ ಲಕ್ಷ್ಮಿ, ಶೃತಿ ಕುಮಾರಿ, ಪ್ರದೀಪ್ ಸಹಕರಿಸಿದರು.