





ಪುತ್ತೂರು: ಈ ಬಾರಿಯ ನವರಾತ್ರಿ ದಸರಾ ಹಬ್ಬದ ಸಡಗರಕ್ಕೆ ಪುತ್ತೂರು ಸಿಟಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ವೈದ್ಯೆ ಡಾ. ನಿರುಪಮಾ ಎಸ್ ರೈ ಅವರು ನವರಾತ್ರಿ ವೈಭವದ ಫೋಟೋ ಶೂಟ್ ನಲ್ಲಿ ಮಿಂಚಿದ್ದಾರೆ.


ಶಾರದಾ ಮಾತೆಯ ಫೋಟೋ ಶೂಟ್ ನಲ್ಲಿ ಪ್ರೊಫೆಷನಲ್ ಬ್ಯೂಟಿ ಪಾರ್ಲರ್ ಮಾಲಕಿ ಸ್ವಾತಿ ಮತ್ತು ಅಶ್ವಿನಿ ಪ್ರಸಾಧನ ನೆರವೇರಿಸಿದ್ದಾರೆ. ರೈನ್ ಬೋಹಟ್(Rainbowhut) ಸ್ಟುಡಿಯೋಸ್ ನ ಸುಪ್ರೀತ್ ಛಾಯಾಗ್ರಹಣ ನಡೆಸಿದ್ದು, ಚೇತನ್ ಗಾಣಿಗ ಹಾಗೂ ಮದನ್ ಕೊರಿಯಾಗ್ರಫಿ ಮಾಡಿರುತ್ತಾರೆ.





ಡಾ.ನಿರುಪಮಾ ಎಸ್. ರೈ ಅವರು ಈ ಹಿಂದೆ ನವರಾತ್ರಿ ವೈಭವ ಫೋಟೋ ಶೂಟ್ ನಲ್ಲಿಯೂ ಶ್ರೀ ದುರ್ಗೆ ಹಾಗೂ ಶ್ರೀ ಕಾಳಿಮಾತೆಯ ಅವತಾರದಲ್ಲಿ ಕಾಣಿಸಿಕೊಂಡಿದ್ದರು.








