ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತೀ ಶಿಕ್ಷಣ ಸಂಸ್ಥೆ ಆಯೋಜಿಸಿರುವ ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯ ನಗರ ಪಾಲಿಕೆ ಪರಿಷದ್, ಪಂಡಿತ್ ದೀನ್ ದಯಾಳ್ ತರಂತಾಲ್ ನಲ್ಲಿ ಸೆ.2 ಮತ್ತು 3ರಂದು ನಡೆದ ವಿದ್ಯಾ ಭಾರತಿ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಿ. ಬಿ. ಎಸ್.ಸಿ ನ 9ನೇ ತರಗತಿ ವಿದ್ಯಾರ್ಥಿನಿಯಾದ ಕು|ಸಿಯಾ ಭಾವಿನ್ ಸವಜಾನಿ ಇವರು, 200 ಮೀಟರ್ ಫ್ರೀ ಸ್ಟೈಲ್ ಮತ್ತು 4×100 ಮೆಡ್ಲೆಯ್ ರಿಲೇ, 4×100 ರಿಲೇ ಫ್ರೀ ಸ್ಟೈಲ್ ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಂತೆಯೇ, 100ಮೀಟರ್ ಬ್ಯಾಕ್ ಸ್ಟ್ರೋಕ್, 100 ಮೀಟರ್ ಫ್ರೀ ಸ್ಟೈಲ್ ನಲ್ಲಿ ಬೆಳ್ಳಿಪದಕವನ್ನು ತನ್ನದಾಗಿಸಿಕೊಳ್ಳುವ ಮೂಲಕ ರಾಜಕೋಟ್ ನಲ್ಲಿ ನಡೆಯುವ ಎಸ್ ಜಿ ಐ ಎಫ್ ಮೀಟ್ ಗೆ ಆಯ್ಕೆಯಾಗಿರುತ್ತಾರೆ. ಇವರು, ಪುತ್ತೂರಿನ ಬಾಲವನದ ಈಜು ತರಬೇತಿದಾರರಾದ ಪಾರ್ಥ ವಾರಣಾಸಿ, ನಿರೂಪ್ ಕೋಟ್ಯಾನ್ ಮತ್ತು ದೀಕ್ಷಿತ್ ಇವರಿಂದ ಸುಮಾರು 10 ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಾರೆ.
ಇವರು ಪ್ರಸ್ತುತ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ವಾಸವಾಗಿರುವ ಹಾಗೂ ಕೋಡಿಂಬಾಡಿಯ ‘ಕೃಷ್ಣಕೃಪಾ’ ಅಡಿಕೆ ಖರೀದಿ ಮತ್ತು ಸಂಸ್ಕರಣಾ ಉದ್ಯಮದ ಮಾಲೀಕರಾದ ಭಾವಿನ್ ಅಶೋಕ್ ಭಾಯಿ ಸವಜಾನಿ ಮತ್ತು ಸಹನಾ ಭಾವಿನ್ ಸವಜಾನಿ ದಂಪತಿ ಸುಪುತ್ರಿ.