





ರಾಮಕುಂಜ: ವಿದ್ಯುತ್ ಶಾಕ್‌ನಿಂದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಡಬ ತಾಲೂಕಿನ ಕೊಯಿಲ ಗ್ರಾಮದ ವಳಕಡಮದಲ್ಲಿ ಅ.4ರಂದು ಸಂಜೆ ನಡೆದಿದೆ.


ವಳಕಡಮ ಕೆರೆಂತೆಲ್ ನಿವಾಸಿ ಬಾಬು ಮುಗೇರ (58ವ.) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಬಾಬು ಮುಗೇರ ಅವರು ಸಂಜೆ ವೇಳೆ ಮನೆಯಲ್ಲಿ ಟಾರ್ಚ್ ಲೈಟ್ ಚಾರ್ಜ್‌ಗೆ ಇಡುತ್ತಿದ್ದ ವೇಳೆ ಅವರಿಗೆ ವಿದ್ಯುತ್ ಶಾಕ್ ಹೊಡೆದಿದೆ ಎಂದು ವರದಿಯಾಗಿದೆ.





ತಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಾಬು ಅವರು ಕಳೆದ ಒಂದು ವರ್ಷದಿಂದ ಅನಾರೋಗ್ಯ ಪೀಡಿತರಾಗಿದ್ದು ಒಂದು ತಿಂಗಳ ಹಿಂದೆ ಚೇತರಿಸಿಕೊಂಡು ನಡೆದಾಡಲು ಆರಂಭಿಸಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.










