ಪುತ್ತೂರು: ಮೊಟ್ಟೆತಡ್ಕ ಮಿಶನ್ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಯಕ್ಷಗಾನ ಬಯಲಾಟ ಏಕಾದಶಿ ದೇವಿ ಮಹಾತ್ಮೆ ಅ.4ರಂದು ನಡೆಯಿತು.
ಮುಮ್ಮೇಳದಲ್ಲಿ ದೇವೇಂದ್ರನಾ ಪ್ರಚೇತ್ ಆಳ್ವ ಬಾರ್ಯ, ನಾಡಿ ಜಂಗನಾಗಿ ಪೃಥ್ವಿ ಶೆಟ್ಟಿ ಕಾಟುಕುಕ್ಕೆ ಬಂಡಾಸುರನಾಗಿ ಸುರೇಖಾ ಅಶೋಕ್ ರೈ, ಕೋಲಾಸುರನಾಗಿ ಪ್ರಸಕ್ತಾ ರೈ, ವಿಷ್ಣುವಾಗಿ ಪ್ರೇಮಾ ಕಿಶೋರ್, ಗರುಡನಾಗಿ ರೇಣುಕಾ ಗೌಡ ಕುಲ್ಕುಂದ, ಮೇಘಮುಖಿಯಾಗಿ ಆಜ್ಞ ಸೋಹಂ, ಮುರಾಸುರನಾಗಿ ಸಂದೇಶ್ ದೀಪ್ ರೈ ಕಲ್ಲಂಗಳ, ಶ್ರೀದೇವಿಯಾಗಿ ಜ್ಯೋತಿ ಅಶೋಕ್ ಕೆದಿಲ, ರಾಜ ವೈಖನನಾಗಿ ಪುಷ್ಪ ಪ್ರಭಾಕರ್, ಯಮನಾಗಿ ಡಾಕ್ಟರ್ ಅನನ್ಯ ಲಕ್ಷ್ಮಿ ಸಂದೀಪ್, ಚಿತ್ರಗುಪ್ತನಾಗಿ ಸಚ್ಚಿದಾನಂದ ಪ್ರಭು, ಹಿಮ್ಮೇಳದಲ್ಲಿ ಭಾಗವತರಾಗಿ ರಚನಾ ಚಿದ್ಗಲ್, ಚೆಂಡೆಯಲ್ಲಿ ಬಾಲಸುಬ್ರಹ್ಮಣ್ಯ ಭಟ್ ಗುತ್ತಿಗಾರು, ಮದ್ದಲೆಯಲ್ಲಿ ಲಕ್ಷ್ಮೀಶ ಶಗರಿತಾಯ ಪಂಜ, ಚಕ್ರತಾಳದಲ್ಲಿ ಗಗನ್ ಪಂಜ ಭಾಗವಹಿಸಿದ್ದರು.