ಪುತ್ತೂರು: ಸವಣೂರು ಗ್ರಾಮದ ಆರೇಲ್ತಡಿಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಉಳ್ಳಾಕುಲು ಮತ್ತು ಕೆಡೆಂಜೊಡಿತ್ತಾಯ ದೈವಸ್ಥಾನದಲ್ಲಿ ಅ. 7 ರಂದು ಬ್ರಹ್ಮ ಶ್ರೀ ನೀಲೇಶ್ವರ ಆರೋತ್ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಅನುಜ್ಞಾ ಕಲಶ ಮತ್ತು ಬಾಲಾಲಯ ಪ್ರತಿಷ್ಠೆಯು ವಿವಿಧ ವೈಧಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ದೈವಸ್ಥಾನದ ಜೀಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕಿನಾರ, ಅಧ್ಯಕ್ಷ ದಿನೇಶ್ ಮೆದು, ಕಾರ್ಯದರ್ಶಿ ಚಂದ್ರಶೇಖರ ಪಟ್ಟೆ, ಉಪಾಧ್ಯಕ್ಷ ಚಂದಪ್ಪ ಪೂಜಾರಿ ಊರುಸಾಗು, ಗೌರವ ಸಲಹೆಗಾರರಾದ ನವೀನ್ ಕುಮಾರ್ ಶೆಟ್ಟಿ ಮುಗೇರುಗುತ್ತು, ರಾಕೇಶ್ ರೈ ಕೆಡೆಂಜಿ, ಕುಂಜಾಡಿ ಪ್ರಕಾಶ್ಚಂದ್ರ ರೈ, ಶಿವಣ್ಣ ಗೌಡ ಇಡ್ಯಾಡಿ, ತಾರಾನಾಥ ಕಾಯರ್ಗ, ಸತೀಶ್ ಶೆಟ್ಟಿ ಕಿನಾರ, ವಾಸುದೇವ ಇಡ್ಯಾಡಿ, ತೀರ್ಥರಾಮ ಕೆಡೆಂಜಿ, ಕುಶಾಲಪ್ಪ ಗೌಡ ಇಡ್ಯಾಡಿ, ರಾಜೇಂದ್ರ ಪ್ರಸಾದ್ ಮುಗೇರುಗುತ್ತು, ಮೋನಪ್ಪ ಆರೇಲ್ತಡಿ, ಪ್ರಕಾಶ್ ಪಟ್ಟೆ, ಗುಡ್ಡಣ್ಣ ಶೆಟ್ಟಿ ನಡುಬೈಲು, ಪ್ರಭಾಕರ್ ಶೆಟ್ಟಿ ನಡುಬೈಲು, ಸಂತೋಷ್ ಪಟ್ಟೆ, ಕೃಷ್ಣ ಭಟ್ ಕುಕ್ಕುಜೆ, ವಿಜಯ ಈಶ್ವರ ಗೌಡ, ಮೋಹನ್ ರೈ ಕೆರೆಕೋಡಿ, ಚಂದ್ರಶೇಖರ ಮೆದು, ಪ್ರೇಮಚಂದ್ರ ಮೆದು, ಪರಮೇಶ್ವರ ಇಡ್ಯಾಡಿ, ಗಿರೀಶ್ ಮೆದು, ಪರಮೇಶ್ವರ ಮಡಿವಾಳ ಸೇರಿದಂತೆ ನೂರಾರು ಮಂದಿ ಭಾಗವಹಿಸಿದರು.