ಪುತ್ತೂರು: ದ್ವಾರಕಾ ಪ್ರತಿಷ್ಠಾನ ಪುತ್ತೂರು ಇವರು ನವರಾತ್ರಿಯ ಪ್ರಯುಕ್ತ ಆಯೋಜಿಸಿದ ಗಾನ ಸುಧಾರಸ ಕಾರ್ಯಕ್ರಮವು ನವಚೇತನ ರಿಟೈರ್ಮೆಂಟ್ ಟೌನ್ಶಿಪ್ ಶಾಂತಿಗೋಡು ಇಲ್ಲಿ ಅ.6ರಂದು ಜರಗಿತು.
ಈ ಸಂದರ್ಭದಲ್ಲಿ ದ್ವಾರಕಾ ಕಲಾ ಶಾಲೆಯ ವಿದ್ಯಾರ್ಥಿಗಳಾದ ಅಕ್ಷರಿ, ವಂಶಿಕ, ಆದಿತ್ಯ ಕೃಷ್ಣ, ಸನಿಹ ಇವರಿಂದ ಕೀಬೋರ್ಡ್ ವಾದನ ಕಾರ್ಯಕ್ರಮವು ಗುರುಗಳಾದ ಬಾಬಣ್ಣ ಮಾಸ್ಟರ್ ಅವರ ಮಾರ್ಗದರ್ಶನದಲ್ಲಿ ಜರಗಿತು. ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಹಾಗೂ ಉಪಾಧ್ಯಕ್ಷೆ ಅಶ್ವಿನಿ ಎನ್ ಇವರು ನವಚೇತನ ರಿಟೈರ್ಮೆಂಟ್ ಟೌನ್ಶಿಪ್ನ ರೂವಾರಿಗಳಾದ ಡಾ| ಶಾಮ್ ಭಟ್ ದಂಪತಿಯನ್ನು ಸೇವಾಶ್ರೀ ಪ್ರಶಸ್ತಿಯೊಂದಿಗೆ ಗೌರವಿಸಿದರು. ಗಾನ ಸುಧಾರಸ ಕಾರ್ಯಕ್ರಮವನ್ನು ಹಿರಿಯ ಗಾಯಕರಾದ ವೆಂಕಟಕೃಷ್ಣ ಭಟ್ ಮತ್ತು ತಂಡದವರು ಸುಮಾರು 1 ಗಂಟೆ 30 ನಿಮಿಷಗಳ ಕಾಲ ನಡೆಸಿಕೊಟ್ಟರು. ನಿಯತಿ ಭಟ್ ಪ್ರಾರ್ಥಿಸಿದರು, ಧನ್ಯಶ್ರೀ ಸ್ವಾಗತಿಸಿ, ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಅಮೃತಕೃಷ್ಣ ಎನ್ ವಂದಿಸಿದರು. ದುರ್ಗಾ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ನವಚೇತನ ಬಡಾವಣೆ ನಿವಾಸಿಗಳು, ದ್ವಾರಕಾ ಪ್ರತಿಷ್ಠಾನದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾದರು.