ಸವಣೂರು:ವೃತ್ತಿ ಕ್ಷೇತ್ರದಲ್ಲಿನ ಸೇವೆ,ಸಾಧನೆಗಾಗಿ ಮುಖ್ಯಮಂತ್ರಿ ಪದಕ ಪುರಸ್ಕೃತರಾಗಿರುವ ನಿವೃತ್ತ ಎಎಸ್‌ಐ, ಸವಣೂರು ಗ್ರಾಮದ ನಡುಬೈಲು ನಿವಾಸಿ ಎಸ್. ಬಾಲಕೃಷ್ಣ ಶೆಟ್ಟಿ(73ವ.)ರವರು ಅಲ್ಪಕಾಲದ ಅಸೌಖ್ಯದಿಂದ ಅ.8ರಂದು ಮಂಗಳೂರು ಎಜೆ ಆಸ್ಪತ್ರೆಯಲ್ಲಿ ನಿಧನರಾದರು.
1975ರಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ಇಲಾಖಾ ಕರ್ತವ್ಯಕ್ಕೆ ಸೇರ್ಪಡೆಯಾಗಿದ್ದ ಇವರು ಬಳಿಕ ಮೂಲ್ಕಿ, ಮೂಡಬಿದ್ರೆ, ಬೈಂದೂರು, ಬ್ರಹ್ಮಾವರ,ಪುತ್ತೂರು ಪೊಲೀಸ್ ಅರಣ್ಯ ಸಂಚಾರಿ ದಳದಲ್ಲಿ ಕರ್ತವ್ಯ ಮುಂದುವರಿಸಿ, ಎಎಸ್‌ಐ ಆಗಿ ಭಡ್ತಿ ಹೊಂದಿದ ಬಳಿಕ ಸುಳ್ಯದ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ 35ವರ್ಷಗಳ ಇಲಾಖಾ ಸೇವೆಯಿಂದ 2011ರ ಫೆ. 28ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ವಯೋ ನಿವೃತ್ತಿ ಹೊಂದಿದ್ದರು.
ಇವರು ತನ್ನ ಕರ್ತವ್ಯದ ಅವಧಿಯಲ್ಲಿ, ಅಪರಾಧ ಪ್ರಕರಣಗಳ ಪತ್ತೆಯಲ್ಲಿ ಮಾಡಿರುವ ಸಾಧನೆಗಾಗಿ 1986ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತರಾಗಿದ್ದರು.ಮೃತರು ಪತ್ನಿ ಜಯಂತಿ ಶೆಟ್ಟಿ, ಪುತ್ರರಾದ ಬಿಪಿನ್ ಶೆಟ್ಟಿ ಮತ್ತು ಸಚಿನ್ ಶೆಟ್ಟಿ ಅವರನ್ನು ಅಗಲಿದ್ದಾರೆ.ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.