ಪುತ್ತೂರು ಶಾರದೋತ್ಸವ: 6ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ

0

ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 90ನೇ ವರ್ಷದ ನವರಾತ್ರಿ ಉತ್ಸವ, ಪುತ್ತೂರು ಶಾರದೋತ್ಸವದ 6ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಅ.8ರಂದು ಸಂಜೆ ನಡೆಯಿತು.


ಕೆದಂಬಾಡಿಗುತ್ತು ರತ್ನಾಕರ್ ರೈ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಳೆದ 2-3 ವರ್ಷಗಳಿಂದ ನನ್ನ ಸಹೋದರ ಕೆದಂಬಾಡಿಗುತ್ತು ಸೀತಾರಾಮ ರೈ ಇಲ್ಲಿ ಭಾಗವಹಿಸುವಿಕೆಯ ಮೂಲಕ ಇವತ್ತು ಶಾರದೆಯ ಪ್ರೇರಣೆಯಿಂದ ಈ ಕಾರ್ಯಕ್ರಮದಲ್ಲಿ ನಾನು ಇಲ್ಲಿ ಬಂದಿದ್ದೇನೆ. ಬಹಳಷ್ಟು ಇತಿಹಾಸ ಹೊಂದಿರುವ, ಶಕ್ತಿ ಸ್ವರೂಪಿಣಿಯಾದ ಶಾರದಾ ಮಾತೆ ನೆಲೆಸಿದ್ದಾರೆ ಎನ್ನುವಂತದ್ದು ಪುತ್ತೂರು ತಾಲೂಕು ಅಲ್ಲದೇ ಪರತಾಲೂಕಿನಲ್ಲಿಯೂ ಈ ವಿಚಾರ ಪಸರಿಸಿದೆ. ಇಲ್ಲಿ ಬಹಳಷ್ಟು ಮನಸ್ಸಿಗೆ ಶಾಂತತೆ ಇದೆ, ನೆಮ್ಮದಿ ಇದೆ, ಶುಭ್ರವಾದ ಮನಸ್ಸಿನಿಂದ ಎಲ್ಲರೂ ಒಬ್ಬರಿಗೊಬ್ಬರು ಮಾತನಾಡುವುದು, ಉಪಚರಿಸುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಈ ಕ್ಷೇತ್ರದಲ್ಲಿ ಪುರಾತನ ಕಾಲದಿಂದಲೂ ಶಕ್ತಿಮೀರಿ ಪ್ರಯತ್ನ ಮಾಡಿದ ಪದಾಧಿಕಾರಿಗಳಿಗೆ ಮನದಾಳದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ, ಇಲ್ಲಿ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ಅವರು ಮಾಡಿದ ಸೇವೆಯ ಪ್ರತಿಫಲ ಎಂದು ಹೇಳಬಹುದು. ನವರಾತ್ರಿ ದಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡುವವರು ಯಾವುದೇ ಫಲಾಪೇಕ್ಷೆ ಇಲ್ಲಿದೇ ಸೇವೆ ಮೂಲಕ ನೀಡುತ್ತಿದ್ದಾರೆ, ಎಲ್ಲರಿಗೂ ಶಾರದಾ ಮಾತೆಯ ಕೃಪಾಕಟಾಕ್ಷ ಇರಲಿ ಎಂದರು.

ಪುತ್ತೂರು ಹಿಂದೂ ರುದ್ರಭೂಮಿಯ ನಿರ್ವಾಹಕ ಸತೀಶ್ ಮಡಿವಾಳ, ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕಿ ಹೇಮಲತಾ ಪಿ.ವಿ, ಗೌರವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ, ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಪ್ರಧಾನ ಕಾರ್ಯದಶಿ ಜಯಂತ್ ಉರ್ಲಾಂಡಿ, ಉಪಾಧ್ಯಕ್ಷ ಯಶವಂತ ಆಚಾರ್ಯ, ಧೀಶಕ್ತಿ ಮಹಿಳಾ ಯಕ್ಷ ಬಳಗ ತೆಂಕಿಲ ಇದರ ನಿರ್ದೇಶಕಿ ಪದ್ಮ ಕೆ.ಆರ್. ಆಚಾರ್ಯ, ವಿದುಷಿ ಸ್ವರ್ಣ ಎನ್. ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here