





ಪುತ್ತೂರು: ಉರ್ಲಾಂಡಿ ನಿವಾಸಿಯಾಗಿರುವ ಆಟೋ ರಿಕ್ಷಾ ಚಾಲಕ ದೇವದಾಸ್(58ವ) ನ.26ರಂದು ನಿಧನರಾದರು.


ತಮಿಳುನಾಡು ಮೂಲದವರಾದ ದೇವದಾಸ್ ಅವರು ಹಲವು ವರ್ಷಗಳಿಂದ ಪುತ್ತೂರಿನಲ್ಲಿ ವಾಸ್ತವ್ಯ ಹೊಂದಿದ್ದರು. ಪುತ್ತೂರು ಬಿ.ಎಮ್.ಎಸ್ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದ ಸದಸ್ಯರಾಗಿರುವ ದೇವದಾಸ್ ಅವರು ಪುತ್ತೂರಿನಲ್ಲಿ ಆಟೋ ರಿಕ್ಷಾ ಬಾಡಿಗೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅಲ್ಪಕಾಲದ ಅಸೌಖ್ಯದಿಂದಾಗಿ ನಿಧನರಾದರು.





ಮೃತರು ಸಹೋದರರನ್ನು ಅಗಲಿದ್ದಾರೆ.








