ಕಡಬ: ಆಲಂಕಾರು ಸಿ.ಎ.ಬ್ಯಾಂಕ್ ಸಮೀಪದ ಲಕ್ಷ್ಮಿರಾಮ ಕಾಂಪ್ಲೆಕ್ಸ್‌ನಲ್ಲಿ ರಾಜಾರಾಮ್ ಗಾರ್ಮೆಂಟ್ಸ್ ಅ.10ರಂದು ಶುಭಾರಂಭಗೊಂಡಿತು. ಅರ್ಚಕ ಕೃಷ್ಣಪ್ರಸಾದ್ ಕೇವಳ ಅವರು ಪೂಜಾವಿಧಿ ವಿಧಾನ ನೆರವೇರಿಸಿದರು. ಆಲಂಕಾರು ಗ್ರಾ.ಪಂ.ಅಧ್ಯಕ್ಷೆ ಸುಶೀಲ ಅವರು ದೀಪ ಪ್ರಜ್ವಲಿಸಿದರು.
ಬಳಿಕ ಮಾತನಾಡಿದ ಅವರು ಕಡಬ ತಾಲೂಕಿನ ಪ್ರಮುಖ ಪಟ್ಟಣವಾಗಿ ಬೆಳೆಯುತ್ತಿರುವ ಆಲಂಕಾರು ಪೇಟೆಯಲ್ಲಿ ಹೊಸ ಹೊಸ ಉದ್ದಿಮೆಗಳು ಆರಂಭಗೊಳ್ಳುತ್ತಿದೆ. ಇದು ಆಲಂಕಾರು ಗ್ರಾಮದ ಅಭಿವೃದ್ಧಿಗೂ ಪೂರಕವಾಗಿದೆ. ಗ್ರಾಮೀಣ ಪ್ರದೇಶವಾದ ಆಲಂಕಾರಿನಲ್ಲಿ ರಾಜಾರಾಮ್ ಗಾರ್ಮೆಂಟ್ಸ್ ಆರಂಭಗೊಂಡಿರುವುದು ಈ ಭಾಗದ ಜನರಿಗೆ ವರದಾನವಾಗಲಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಆಲಂಕಾರು ಗ್ರಾ.ಪಂ. ಉಪಾಧ್ಯಕ್ಷ ರವಿ ಕುಂಞಲಡ್ಡ, ಸದಸ್ಯೆ ರೂಪಶ್ರೀ, ಮೆಸ್ಕಾಂ ಜೆಇ ಪ್ರೇಮ್‌ಸಿಂಗ್, ಸಿಂಗಾರ ಫ್ಯಾನ್ಸಿ ಮಾಲಕ ಕೇಶವ ರಂಗಾಜೆ, ಎಸ್.ಎಚ್.ಸ್ಪೋರ್ಟ್ಸ್ ಮಳಿಗೆ ಮಾಲಕ ಶರೀಫ್ ಬಿ.ಹೆಚ್., ಲಕ್ಷ್ಮಿರಾಮ ಕಾಂಪ್ಲೆಕ್ಸ್ ಮಾಲಕರಾದ ರಾಮಣ್ಣ ಗೌಡ, ಲಕ್ಷ್ಮಿ, ಆಶಯ, ಆದ್ಯ, ಪವರ್‌ಮ್ಯಾನ್ ಮನೋಜ್, ಬೆಂಗಳೂರು ಆರ್.ಟಿ.ನಗರದ ರಾಮ್‌ದೇವ್ ಮೆಡಿಕಲ್ ಸ್ಟೋರ್ ಮಾಲಕ ಧನರಾಮ್, ಬೆಳ್ಳಾರೆ ಶ್ರೀಕೃಷ್ಣ ಫ್ಯಾನ್ಸಿ ಸ್ಟೋರ್ ಮಾಲಕ ಪ್ರೇಮ್, ಬೆಳ್ಳಾರೆ ಮಹಾಲಕ್ಷ್ಮಿ ಗಾರ್ಮೆಂಟ್ಸ್ ಮಾಲಕ ಒಮರಾಮ್, ಕೊಕ್ಕಡ ಎಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್ ಸಾಮಾಗ್ರಿಗಳ ಮಾರಾಟ ಮಳಿಗೆ ಪೂಜಾ ಏಜೆನ್ಸಿಸ್ ಮಾಲಕ ಅರ್ಜುನ್ ಸಿಂಗ್ ಮತ್ತಿತರರು ಆಗಮಿಸಿ ನೂತನ ಸಂಸ್ಥೆಗೆ ಶುಭಹಾರೈಸಿದರು.
ಎಲ್ಲಾ ರೀತಿಯ ಬಟ್ಟೆಗಳು ಲಭ್ಯ:
ರಾಜಾರಾಮ್ ಗಾರ್ಮೆಂಟ್ಸ್ ಮಾಲಕ ಗೋಪಾರಾಮ್ ಅವರು ಸ್ವಾಗತಿಸಿ ಮಾತನಾಡಿ, ನಮ್ಮಲ್ಲಿ ಎಲ್ಲಾ ರೀತಿಯ ರೆಡಿಮೆಡ್ ಬಟ್ಟೆಗಳು, ಫ್ಯಾನ್ಸಿ ಸಾರಿಗಳು, ಫ್ಯಾನ್ಸಿ ಟಾಪ್, ಧೋತಿ ಪ್ಯಾಂಟ್ಸ್, ಶರ್ಟ್ಸ್ ಹಾಗೂ ಎಲ್ಲಾ ರೀತಿಯ ಮಹಿಳೆಯರ, ಪುರುಷರ ಹಾಗೂ ಮಕ್ಕಳ ಸಿದ್ಧ ಉಡುಪುಗಳು ದೊರೆಯುತ್ತವೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.