ಉಪ್ಪಿನಂಗಡಿ: ಪ್ರಾಕೃತಿಕ ವಿಕೋಪಗಳ ಸಂದರ್ಭ ರಕ್ಷಣಾ ಕಾರ್ಯ-ಎನ್‌ಡಿಆರ್‌ಎಫ್‌ನಿಂದ ಪ್ರಾತಕ್ಷಿಕೆ

0

ಉಪ್ಪಿನಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ ಇದರ ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಇದರ ಸಹಯೋಗದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಆರ್‌ಎಫ್)ನ ಪ್ರಥಮ ಚಿಕಿತ್ಸೆ, ಜೀವ ರಕ್ಷಕ ಹಾಗೂ ವಿಪತ್ತು ನಿರ್ವಹಣೆಯ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯು ಇಲ್ಲಿನ ಕಾಲೇಜು ಮತ್ತು ನೇತ್ರಾವತಿ ನದಿ ಸಂಗಮ ಸ್ಥಳದಲ್ಲಿ ನಡೆಯಿತು.


ಎನ್‌ಡಿಆರ್‌ಎಫ್‌ನ 10 ನೇ ಬೆಟಾಲಿಯನ್‌ನ ಟೀಮ್ ಕಮಾಂಡರ್ ಶಾಂತಿಲಾಲ್ , ಅಧಿಕಾರಿಗಳಾದ ದೇವರಾಜ್ ಇಕ್ಕೇರಿ, ಧ್ಯಾನೇಶ್ , ನಿಂಗೇಗೌಡ, ಯಲ್ಲಪ್ಪ, ಅಲ್ಬಿನ್ ಜಗದೀಶ್, ಶ್ರೀಲಾಲ್, ರಮೇಶ್ ರೆಡ್ಡಿ, ಜಾಕ್ಲಿನ್ ವಿನು, ತನ್ವೀರ್ ಆಹಮ್ಮದ್, ಸ್ವಾಮಿ, ಶ್ರೀಕಾಂತ್, ಬಾಲಾಜಿ, ಬಾಲಕೃಷ್ಣ, ಬಾಹು ಸಾಹೇಬ್ ಜೌಲಗೆರವರನ್ನು ಒಳಗೊಂಡ ಎನ್‌ಡಿಆರ್‌ಎಫ್ ತಂಡವು ಭೂಕಂಪ, ಪ್ರಾಕೃತಿಕ ವಿಕೋಪಗಳು, ಬೆಂಕಿ ಅವಘಡ, ರೈಲು ಅಪಘಾತ ಸೇರಿದಂತೆ ಯಾವುದೇ ಅವಘಡಗಳು ಸಂಭವಿಸಿದಾಗ ಕೈಗೊಳ್ಳಬೇಕಾದ ರಕ್ಷಣಾ ಕಾರ್ಯದ ಸ್ವರೂಪ, ಬಹು ಮಹಡಿ ಕಟ್ಟಡದಲ್ಲಿ ಸಿಲುಕಿದರ ರಕ್ಷಣಾ ಕಾರ್ಯ ನದಿಯಲ್ಲಿ ಅಥವಾ ನೀರಿನ ನೆಲೆಯಲ್ಲಿ ಅವಘಡ ಸಂಭವಿಸಿದಾಗ ಕೈಗೊಳ್ಳಬೇಕಾದ ರಕ್ಷಣಾ ಕಾರ್ಯತಂತ್ರಗಳನ್ನು, ನೀಡಬೇಕಾದ ಪ್ರಥಮ ಚಿಕಿತ್ಸೆಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ವಿವರಣೆ ಸಹಿತವಾಗಿ ತೋರಿಸಿಕೊಟ್ಟರು.


ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಕೃಷ್ಣರಾವ್ ಆರ್ತಿಲ ಮಾತನಾಡಿ , ಅಪತ್ಕಾಲದಲ್ಲಿ ಕೈಗೊಳ್ಳಬೇಕಾದ ರಕ್ಷಣಾ ಕಾರ್ಯತಂತ್ರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯವಾಗಿದೆ. ಇದನ್ನು ನಾಗರಿಕರಿಗೂ ತಿಳಿಸುವ ಕಾರ್ಯ ನಡೆಯಬೇಕೆಂದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಶೇಖರ್ ಎಂ.ಬಿ., ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಪ್ರವೀಣ್ ಕುಮಾರ್ ಕುಡುಮಾರ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರವಿರಾಜ್ ಎಸ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಹರಿಪ್ರಸಾದ್ ಎಸ್., ಕೇಶವ ಕುಮಾರ ಬಿ., ಉಪನ್ಯಾಸಕರಾದ ನಂದೀಶ್ ವೈ.ಡಿ., ಬಾಲಾಜಿ ಎಂ.ಪಿ., ಪ್ರೊ. ಹುಚ್ಚೇ ಗೌಡ, ದಶರಥ ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here