ಹೊಸಗದ್ದೆ ಶಾಲೆ: ನೂತನ ಶೌಚಾಲಯ ನಿರ್ಮಾಣಕ್ಕೆ ಭೂಮಿಪೂಜೆ

0

ನೆಲ್ಯಾಡಿ: ಬಜತ್ತೂರು ಗ್ರಾಮದ ಹೊಸಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಶೌಚಾಲಯ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನಡೆಸಿ ಶಂಕುಸ್ಥಾಪನೆ ನಡೆಸಲಾಯಿತು.


ಹೊಸಗದ್ದೆ ಶಾಲೆಗೆ ಎಂಆರ್‌ಪಿಎಲ್ ಸಂಸ್ಥೆಯಿಂದ ಕೊಡುಗೆಯಾಗಿ ಬಂದ ರೂ.15 ಲಕ್ಷದಲ್ಲಿ ಬಾಲಕ-ಬಾಲಕಿಯರ ಎರಡು ಶೌಚಾಲಯ ನಿರ್ಮಾಣವಾಗಲಿದೆ. ಅರ್ಚಕರಾದ ನಾಗರಾಜ್ ಜಿ.ಎಂ ಭೂಮಿಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಗುರು ವಿದ್ಯಾ ಕೆ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ವಸಂತಲಕ್ಷ್ಮಿ, ಸದಸ್ಯರಾದ ರುಕ್ಮಯ್ಯ ಗೌಡ ಓಮಂದೂರು ಮತ್ತು ಸಾವಿತ್ರಿ, ಶಿಕ್ಷಕರಾದ ಮಾಲತಿ, ಅತಿಥಿ ಶಿಕ್ಷಕರಾದ ಚಿತ್ರಾವತಿ, ಪವಿತ್ರಾ, ಗುತ್ತಿಗೆದಾರರಾದ ಪ್ರಶಾಂತ್ ಎಂ.ವಿ, ಪಂಚಾಯತ್ ನೀರು ಸರಬರಾಜು ಸಿಬಂದಿ ತಿಮ್ಮಯ್ಯ, ಶಾಲಾ ಫೋಷಕರು ಹಾಗೂ ಮಕ್ಕಳು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here