ಕುಂಜೂರು ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ‘ನೃತ್ಯೋಹಂ’

0

ಪುತ್ತೂರು: ಪುತ್ತೂರು ತಾಲೂಕಿನ ಕುಂಜೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪುತ್ತೂರು ನೃತ್ಯೋಪಾಸನಾ
ಕಲಾ ಅಕಾಡೆಮಿ(ರಿ) ನೃತ್ಯ ತಂಡದಿಂದ ‘ನೃತ್ಯೋಹಂ’ ಭರತನಾಟ್ಯ ಕಾರ್ಯಕ್ರಮ ಗುರುವಾರ ಏರ್ಪಟ್ಟಿತು.


ನೃತ್ಯಗುರು, ವಿದುಷಿ ಶಾಲಿನಿ ಆತ್ಮಭೂಷಣ್‌ ಮಾರ್ಗದರ್ಶನದಲ್ಲಿ ನೃತ್ಯ ತಂಡದ ವಿದ್ಯಾರ್ಥಿಗಳು ವೈವಿಧ್ಯಮಯ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿದರು.
ಈ ಸಂದರ್ಭ ಬೆಂಗಳೂರಿನ ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ಉಪ ಆಯುಕ್ತೆ ಡಾ.ದುರ್ಗಾಪರಮೇಶ್ವರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ ಆಗಿರುವ ಪುತ್ತೂರು ಉಪ ತಹಶೀಲ್ದಾರ್‌ ಸುಲೋಚನಾ, ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರದೀಪ್‌ಕೃಷ್ಣ ಬಂಗಾರಡ್ಕ, ದೇವಸ್ಥಾನದ ಹಿರಿಯ ಅರ್ಚಕ ಕೇಶವ ಭಟ್ ಹಳೆಹಿತ್ಲು ಇವರು ನೃತ್ಯಗುರು ಶಾಲಿನಿ ಆತ್ಮಭೂಷಣ್‌ ಅವರನ್ನು ಸನ್ಮಾನಿಸಿ, ಕಲಾವಿದರಿಗೆ ಪ್ರಸಾದ ನೀಡಿ ಗೌರವಿಸಿದರು.ಈಶ್ವರ್‌ ಎಂ.ಎಸ್‌.ನಿರೂಪಿಸಿದರು.

LEAVE A REPLY

Please enter your comment!
Please enter your name here