ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನಕ್ಕೆ ಹೊರೆ ಕಾಣಿಕೆ ಸಮರ್ಪಣೆ

0

ಪುತ್ತೂರು: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ನವರಾತ್ರಿ ಉತ್ಸವಕ್ಕೆ ಹಸಿರುವಾಣಿ ಸಮರ್ಪಣೆ ಸೆ.22ರಂದು ನಡೆಯಿತು.

ಬೆಳಿಗ್ಗೆ ವಿನಾಯಕ ನಗರದ ಶ್ರೀ ಮಹಿಷಮರ್ದಿನಿ ದ್ವಾರದ ಬಳಿ ಹಿರಿಯರಾದ ವಸಂತಿ ಆರ್.ಶೆಟ್ಟಿ ಕಲ್ಪಾಜೆಗುತ್ತು, ಮೋನಪ್ಪ ಗೌಡ ಪಿಲಿಗುಂಡ ಮತ್ತು ಅಣ್ಣು ಪೂಜಾರಿ ಆಚಾರಿಪಾಲು ಅವರು ಉದ್ಘಾಟಿಸಿದರು. ನಂತರ ಮಠಂತಬೆಟ್ಟುವರೆಗೆ ಮೆರವಣಿಗೆಯಲ್ಲಿ ಸಾಗಿ ಮಹಿಷಮರ್ದಿನಿ ದೇವಸ್ಥಾನಕ್ಕೆ ಹೊರೆ ಕಾಣಿಕೆ ಸಮರ್ಪಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ನಿರಂಜನ ರೈ ಮಠಂತಬೆಟ್ಟು ಮತ್ತು ಸದಸ್ಯರು ಸೇರಿದಂತೆ ಹಲವರು ಭಾಗವಹಿಸಿದ್ದರು.


ಮೆರವಣಿಗೆಯನ್ನು ದೇವಳದಲ್ಲಿ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ಪ್ರಾರ್ಥಿಸಿದ ಬಳಿಕ ಹಸಿರುವಾಣಿಯನ್ನು ದೇವರಿಗೆ ಅರ್ಪಿಸಲಾಯಿತು. ನಂತರ ಭಜನಾ ಕಾರ್ಯಕ್ರಮ ಉದ್ಘಾಟನೆಗೊಂಡಿತು.

ಮಠಂತಬೆಟ್ಟು ತರವಾಡು ಮನೆಯವರಿಂದ ಹೊರೆಕಾಣಿಕೆ
ನವರಾತ್ರಿಯ ಪ್ರಥಮ ದಿನವಾದ ಸೆ.22ರಂದು ಮಠಂತಬೆಟ್ಟು ತರವಾಡು ಮನೆಯರಿಂದ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here