ವಿದ್ಯಾ ಭಾರತಿ ಜ್ಞಾನ ವಿಜ್ಞಾನ ಮೇಳದಲ್ಲಿ ಪ್ರಿಯದರ್ಶಿನಿಗೆ ಹಲವು ಪ್ರಶಸ್ತಿ

0

ಬೆಟ್ಟಂಪಾಡಿ:  ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ನರಿಮೊಗರು ಇಲ್ಲಿ ಅ. 14 ರಂದು  ನಡೆದ ಜ್ಞಾನ ವಿಜ್ಞಾನ ಮೇಳದಲ್ಲಿ ಬೆಟ್ಟಂಪಾಡಿ ಯ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ ಲಭಿಸಿವೆ.

 ಹಂಷಿತ 10ನೇ ತರಗತಿ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಪ್ರಥಮ, ಪೂರ್ವಿ ಎಸ್ ಗಣಿತ ಮಾದರಿ ಸ್ಪರ್ಧೆಯಲ್ಲಿ ಪ್ರಥಮ, ಕಥಾ ಕಥನ ಸ್ಪರ್ಧೆಯಲ್ಲಿ 7ನೇ ತರಗತಿ ವಿದ್ಯಾರ್ಥಿ ಅಭಿನವರಾಜ್ ಎನ್ ಪ್ರಥಮ, ನಿವೇದ ಪಿಎನ್ 5 ನೇ ತರಗತಿ ವಿಜ್ಞಾನ ಮಾದರಿಯಲ್ಲಿ ಪ್ರಥಮ ತನ್ವಿ ಶೆಟ್ಟಿ ಹತ್ತನೇ ತರಗತಿ ವಿಜ್ಞಾನ ಮಾದರಿಯಲ್ಲಿ ದ್ವಿತೀಯ, ಧನ್ವಿ ಬಿ ಶೆಟ್ಟಿ  ಹತ್ತನೇ ತರಗತಿ ವಿಜ್ಞಾನ ಮಾದರಿಯಲ್ಲಿ ತೃತೀಯ, ಇಹಾನಿ ಎಸ್ ಶೆಟ್ಟಿ 5ನೇ ತರಗತಿ ಗಣಿತ ಮಾದರಿ ಸ್ಪರ್ಧೆಯಲ್ಲಿ ದ್ವಿತೀಯ, ಕಾರ್ತಿಕೇಯ ನಾಲ್ಕನೇ ತರಗತಿ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ತೃತೀಯ, ಅನ್ವಿತ ಎನ್ ಎಸ್ 9ನೇ ತರಗತಿ ವಿಜ್ಞಾನ ಪ್ರಯೋಗದಲ್ಲಿ ದ್ವಿತೀಯ, ಕೃತಿ ಕೆ ಎಸ್ ಎಂಟನೇ ತರಗತಿ ಗಣಿತ ಮಾದರಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದು ಕುಮಾರಿ ಹಂಶಿತಾ, ಪೂರ್ವಿ ಹಾಗೂ ಅಭಿನವರಾಜ್ ಎನ್  ಪ್ರಾಂತ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳನ್ನು ಶಿಕ್ಷಕರಾದ ಸಂಧ್ಯಾ ಕುಮಾರಿ.ಜಿ, ಸಂಧ್ಯಾ ಕುಮಾರಿ, ದಿವ್ಯ ಪ್ರಭು, ಕುಮಾರಿ ಭವ್ಯ ಹಾಗೂ ಚಿತ್ರಕಲಾ ಶಿಕ್ಷಕ ರಂಜಿತ್ ತರಬೇತಿಗೊಳಿಸಿರುತ್ತಾರೆ.

LEAVE A REPLY

Please enter your comment!
Please enter your name here