ಕಬಡ್ಡಿ ಪಂದ್ಯಾಟ-ಲಿಟ್ಲ್ ಫ್ಲವರ್ ಶಾಲಾ ತಂಡ ಸತತ 2ನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ,ಉಪನಿರ್ದೇಶಕರ ಕಛೇರಿ(ಆಡಳಿತ)ಚಿಕ್ಕಮಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಡೂರು, ಹಾಗೂ ಕ್ಯಾಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ಪುರ,ಕಡೂರು ಇಲ್ಲಿ ಅ.17ರಂದು ನಡೆದ ಮೈಸೂರು ವಿಭಾಗ ಮಟ್ಟದ 14ರ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲಾ ತಂಡವು ಚಾಂಪಿಯನ್ ಪಡೆದು, ಸತತ 2ನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.


ಮೈಸೂರು ವಿಭಾಗದ ವ್ಯಾಪ್ತಿಯ 8 ಜಿಲ್ಲೆಗಳಿಂದ 8 ಬಲಿಷ್ಠ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಲಿಟ್ಲ್ ಫ್ಲವರ್ ಶಾಲಾ ತಂಡವು ಪ್ರಥಮ ಪಂದ್ಯದಲ್ಲಿ 22, ಸೆಮಿಫೈನಲ್‌ನಲ್ಲಿ 18 ಹಾಗೂ ಫೈನಲ್ ಪಂದ್ಯದಲ್ಲಿ 13 ಅಂಕಗಳ ಗರೀಷ್ಠ ಅಂತರದಿಂದ ಗೆದ್ದುಕೊಂಡಿದೆ. ಪ್ರಥಮ ಬಾರಿಗೆ ಲಿಟ್ಲ್ ಫ್ಲವರ್ ಒಂದೇ ಶಾಲೆಯ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳ ತಂಡವು ವಿಭಾಗ ಮಟ್ಟದ ಪಂದ್ಯಾಟದಲ್ಲಿ ದ.ಕ ಜಿಲ್ಲೆಯನ್ನು ಪ್ರತಿನಿಧಿಸಿದ್ದವು.


ಜುಎನಾ ಡ್ಯಾಝಲ್ ಕುಟಿನ್ಹಾ, ಸನ್ನಿಧಿ, ಜೆನಿಟ ಸಿಂಧು ಪ್ರಸನ್ನ, ಸುಶ್ರಾವ್ಯ, ಹಾರ್ದಿಕ ಪಿ., ಪ್ರದೀಕ್ಷಾ, ನೇಹಾ ಪಿ., ಕೀರ್ತಿ, ಶಿವಾನಿ, ಚೈತನ್ಯ ಬಿ., ಅನ್ವಿತಾ ಕೆ., ಅನ್ವಿ ಕೆ.ಎ. ಶಾಲಾ ತಂಡದಲ್ಲಿ ಭಾಗವಹಿಸಿದ್ದರು. ಕಳೆದ ಸಾಲಿನಲ್ಲಿ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ತಂಡವು ಸತತ ಐದನೇ ಬಾರಿಗೆ ಜಿಲ್ಲಾ ಮಟ್ಟ, ಎರಡನೇ ಬಾರಿಗೆ ವಿಭಾಗ ಮಟ್ಟ ಹಾಗೂ ಎರಡನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ದ.ಕ ಜಿಲ್ಲೆಯಲ್ಲಿ ಬಲಿಷ್ಠ ತಂಡವಾಗಿ ಮೂಡಿಬಂದಿದೆ.ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಮಾರ್ಗದರ್ಶನದಲ್ಲಿ ಸಹ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ತರಬೇತಿ ನೀಡಿರುತ್ತಾರೆ. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಮಾರ್ಗದರ್ಶನದಲ್ಲಿ ಸಹ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ಹಾಗೂ ಹಿರಿಯ ಶಿಕ್ಷಕಿ ವಿಲ್ಮಾ ಫೆರ್ನಾಂಡಿಸ್ ತರಬೇತಿ ನೀಡಿದ್ದಾರೆ.


ಲಿಟ್ಲ್ ಫ್ಲವರ್ ಶಾಲಾ ಸಹ ಶಿಕ್ಷಕರಾಗಿ, ರಾಜ್ಯ ಮಟ್ಟದ ಕಾರ್ಯಕ್ರಮದ ನಿರೂಪಕರು, ಉತ್ತಮ ಸಂಘಟಕರು, ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಬಾಲಕೃಷ್ಣ ರೈ ಪೊರ್ದಾಲ್‌ರವರ ತರಬೇತಿಯಲ್ಲಿ ಕಳೆದ 5 ವರ್ಷಗಳಿಂದ ಸತತ ಜಿಲ್ಲಾ ಮಟ್ಟಕ್ಕೆ ಆಯ್ಕೆ , ಸತತ 3 ವರ್ಷಗಳಿಂದ ರಾಜ್ಯ ಮಟ್ಟ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ, 14ರ ವಯೋಮಾನದ ಬಾಲಕಿಯರ ರಾಜ್ಯ ತಂಡದ ಮುಖ್ಯಸ್ಥರಾಗಿ ರಾಷ್ಟ್ರ ಮಟ್ಟದಲ್ಲಿ ತಂಡವನ್ನು ಮುನ್ನಡೆಸಿದ್ದರು.

LEAVE A REPLY

Please enter your comment!
Please enter your name here