ಪುಣಚ: ಇತ್ತೀಚೆಗೆ ನಿಧನರಾದ ಪುಣಚ ಗ್ರಾಮದ ನಿವಾಸಿ, ನಿವೃತ್ತ ಅರಣ್ಯ ರಕ್ಷಕರಾಗಿದ್ದ ನಿಡ್ಯಾಳ ತಿಮ್ಮಪ್ಪ ಗೌಡರ ವೈಕುಂಠ ಸಮಾರಾಧನೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಮೃತರ ನಿವಾಸದಲ್ಲಿ ಅ.17ರಂದು ನಡೆಯಿತು.
ರಾಮಣ್ಣ ಗೌಡ ವೀರಮಂಗಲ ಮೃತರ ಜೀವನ, ವ್ಯಕ್ತಿತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಅವರ ಸರಳ ಜೀವನ ಆದರ್ಶ ಬದುಕು ನಮಗೆ ಮಾರ್ಗದರ್ಶನವಾಗಿರಲಿ ಎಂದು ನುಡಿ ನಮನ ಸಲ್ಲಿಸಿದರು. ಪುರುಷೋತ್ತಮ ಗೌಡ, ಎ.ವಿ ನಾರಾಯಣ, ಮುರಳೀಧರ ರೈ, ಜಗನ್ನಾಥ ಶೆಟ್ಟಿ, ಶ್ರೀಧರ್ ಶೆಟ್ಟಿ, ಮಹೇಶ್ ಶೆಟ್ಟಿ, ರಾಜೇಂದ್ರ ರೈ, ಸುಬೋಧ ರೈ, ವಿಜಯಲಕ್ಷ್ಮೀ ಗೋಪಾಲ್, ನಾರಾಯಣ ಗೌಡ ಪರ್ಪುಂಜ, ಪುರುಷೋತ್ತಮ ಗೌಡ ನಿಡ್ಯಾಳ, ವಕೀಲ ಬಾಬು ಗೌಡ, ಪ್ರಕಾಶ್ ಗೌಡ ಬಂಗಾಡಿ, ವೆಂಕಪ್ಪ ಗೌಡ, ಮಾಧವ ಗೌಡ, ಕಮಲಾರಾಮಣ್ಣ ಗೌಡ, ರಾಮಕ್ಕ ಕಾಂತಿಲ ಪಾಲ್ಗೊಂಡಿದ್ದರು. ಕುಟುಂಬದ ತರವಾಡು ಮನೆಯ ಶೇಷಪ್ಪ ಗೌಡ, ರಮೇಶ್ ಗೌಡ ನಿಡ್ಯಾಳ, ಐತಪ್ಪ ಗೌಡ ಅಳಕ್ಕಲ, ವಿಷ್ಣು ಗೌಡ ಕಾಣಿಯೂರು ಹಾಗೂ ಪಳಂಬೆ ಮನೆ ಕುಟುಂಬಸ್ಥರು, ಬಂಧುಗಳು, ಹಲವಾರು ಮಿತ್ರರು- ಹಿತೈಷಿಗಳು ಉಪಸ್ಥಿತರಿದ್ದರು.
ಮೃತರ ಪುತ್ರ ಬಾಲಕೃಷ್ಣ ಗೌಡ, ಸೊಸೆ ಭಾರತಿ, ಪುತ್ರಿಯರಾದ ದೇವಕಿ, ಜಯಂತಿ, ಅಳಿಯಂದಿರಾದ ಕೃಷ್ಣಪ್ಪ ಗೌಡ, ಶಿವಪ್ಪ ಗೌಡ ಹಾಗೂ ಮೊಮ್ಮಕ್ಕಳು ಅತಿಥಿಗಳನ್ನು ಸತ್ಕರಿಸಿದರು.
ಮೌನ ಪ್ರಾರ್ಥನೆ- ಪುಷ್ಪಾರ್ಚನೆ:
ಅಗಲಿದ ನಿಡ್ಯಾಳ ತಿಮ್ಮಪ್ಪ ಗೌಡರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.