ಹಿಂದೂ ಹುಡುಗಿಯರ ಕುರಿತು ಅವಹೇಳನಕಾರಿ ಶಬ್ದ ಬಳಕೆ ಆರೋಪ- ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿರುದ್ಧ ದೂರು ದಾಖಲು

0

ಪುತ್ತೂರು:ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಹುಡುಗಿಯರ ಬಗ್ಗೆ ಅವಹೇಳನಕಾರಿ ಶಬ್ದ ಬಳಕೆ ಮಾಡಿರುವುದಾಗಿ ಆರೋಪಿಸಿ ಪಂಜ ಉಪವಲಯ ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಅವರ ವಿರುದ್ಧ ಹಿಂದೂ ಜಾಗರಣಾ ವೇದಿಕೆಯಿಂದ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜವಾಬ್ದಾರಿಯುತ ಸರಕಾರಿ ಹುದ್ದೆಯಲ್ಲಿದ್ದರೂ ಬೇಜವಾಬ್ದಾರಿಯಿಂದ ಸಮಾಜದ ವಿವಿಧ ಪಂಗಡಗಳ, ಜಾತಿಗಳ ಮಧ್ಯೆ ದ್ವೇಷ, ಗಲಭೆ, ದೊಂಬಿ ಉಂಟುಮಾಡುವಂತಹ ಹೇಳಿಕೆ ನೀಡಿರುತ್ತಾರೆ.ಈ ಹಿಂದೆಯೂ ಇವರು ಈ ರೀತಿಯ ಕೃತ್ಯ ಎಸಗಿರುವುದಾಗಿ ಕಂಡುಬರುತ್ತದೆ.ಇವರ ವಿರುದ್ಧ ಪ್ರಕರಣವನ್ನು ದಾಖಲಿಸಿ ತಕ್ಷಣದಲ್ಲೇ ಸೇವೆಯಿಂದ ವಜಾಗೊಳಿಸಿ ಸರಕಾರದ ಅಧಿಕಾರಿಗಳ ಮೇಲಿರುವ ಗೌರವ ಸ್ಥಾನವನ್ನುಳಿಸಬೇಕಾಗಿ ಮತ್ತು ತಪ್ಪಿತಸ್ಥರಾದವರಿಗೆ ಕಾನೂನು ಕ್ರಮದಲ್ಲಿ ಶಿಕ್ಷೆಯನ್ನು ನೀಡಬೇಕಾಗಿ ಹಿಂದೂ ಜಾಗರಣಾ ವೇದಿಕೆಯ ಸುಳ್ಯ ತಾಲೂಕು ಸಂಯೋಜಕ ಸಚಿನ್ ವಳಲಂಬೆ ಅವರು ಬೆಳ್ಳಾರೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರು ಆರೋಪಿ ಸಂಜೀವ ಪೂಜಾರಿ ಕಾಣಿಯೂರು ವಿರುದ್ಧ ಕಲಂ 79 ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪೊಲೀಸರಿಗೆ ದೂರು ನೀಡುವ ಸಂದರ್ಭ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಮೋಹನ್‌ದಾಸ್ ಕಾಣಿಯೂರು, ಸಹ ಸಂಯೋಜಕ ದಿನೇಶ್ ಪಂಜಿಗ, ಜಿಲ್ಲಾ ಪ್ರಮುಖರಾದ ಅನೂಪ್ ಆಳ್ವ, ಹರಿ ಕೊಲ್ಲಮೊಗರು ಜೊತೆಯಲ್ಲಿದ್ದರು.

LEAVE A REPLY

Please enter your comment!
Please enter your name here