ಸಂತ ಫಿಲೋಮಿನಾ ಪ.ಪೂ.ಕಾಲೇಜಿನ ನಂದನ್ ನಾಯ್ಕ ಡೈವಿಂಗ್ ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಆಯೋಜನೆಯಲ್ಲಿ ಅ16ರಂದು ಬೆಂಗಳೂರು ಸೌತ್ ನಲ್ಲಿ ನಡೆದ ‘ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕ್ರೀಡಾ ಕೂಟ 2024-25’ ಡೈವಿಂಗ್ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ನಂದನ್ ನಾಯ್ಕ ಇವರು ಒಂದು ಚಿನ್ನ ಹಾಗೂ ಎರಡು ಬೆಳ್ಳಿ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


ಇವರು ಹೈ ಬೋರ್ಡ್ ವಿಭಾಗದಲ್ಲಿ ಒಂದು ಚಿನ್ನ, 3ಮೀ ಸ್ಪ್ರಿಂಗ್ ಬೋರ್ಡ್ ಮತ್ತು 1ಮೀ ಸ್ಪ್ರಿಂಗ್ ಬೋರ್ಡ್ ವಿಭಾಗದಲ್ಲಿ ಎರಡು ಬೆಳ್ಳಿ ಪದಕವನ್ನು ಪಡೆದಿರುತ್ತಾರೆ. ಇವರು ನ.24 ರಿಂದ 30 ರವರೆಗೆ ಗುಜರಾತಿನ ರಾಜಕೋಟ್ ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಡೈವಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.


ಇವರಿಗೆ ಪರ್ಲಡ್ಕ ಬಾಲವನದ ಆಕ್ವೆಟಿಕ್ ಕ್ಲಬ್ ನ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ನಿರೂಪ ಜಿ ಆರ್, ರೋಹಿತ್ ಪ್ರಕಾಶ್, ದೀಕ್ಷಿತ್ ರಾವ್, ವಿಕಾಸ್ ಹಾಗೂ ವೆಂಕಟೇಶ್ ಇವರು ತರಬೇತಿ ನೀಡಿರುತ್ತಾರೆ. ನಂದನ್ ನಾಯ್ಕ್ ಇವರು ನರಿಮೊಗರು ನಿವಾಸಿ ರವಿ ಸಂಪತ್ ನಾಯ್ಕ ಹಾಗೂ ಕ್ಷಮಿತಾ ಆರ್ ನಾಯ್ಕ ದಂಪತಿಗಳ ಪುತ್ರನಾಗಿದ್ದಾನೆ.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಅಭಿನಂದಿಸಿದರು. ದೈಹಿಕ ಶಿಕ್ಷಕ ನಿರ್ದೇಶಕರಾದ ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here