ಶ್ರೀ ಪ್ರಗತಿ ವಿಸ್ತಾರ ಕಾಲೇಜ್‌ ಫಾರ್‌ ಏವಿಯೇಷನ್‌ – ಆಸಕ್ತ ವಿದ್ಯಾರ್ಥಿಗಳಿಗೆ ವೆಬಿನಾರ್‌ ಆಯೋಜನೆ

0

ಪುತ್ತೂರು: ಬೆಂಗಳೂರಿನ ಖ್ಯಾತ ವಿಮಾನಯಾನ ತರಬೇತಿ ಸಂಸ್ಥೆ ʼಸ್ಕೈಬರ್ಡ್‌ʼ ಏವಿಯೇಷನ್‌ ಸಹಯೋಗದಲ್ಲಿ ಪುತ್ತೂರಿನಲ್ಲಿ ನೂತನವಾಗಿ ಆರಂಭಗೊಂಡ ʼಶ್ರೀ ಪ್ರಗತಿ ವಿಸ್ತಾರ ಕಾಲೇಜು ಫಾರ್‌ ಏವಿಯೇಷನ್‌ ಆಂಡ್‌ ಮ್ಯಾನೇಜ್‌ ಮೆಂಟ್‌ʼ ಆಸಕ್ತ ವಿದ್ಯಾರ್ಥಿಗಳಿಗೆ ಮತ್ತವರ ಪೋಷಕರಿಗೆ ವೆಬಿನಾರ್‌ ಆಯೋಜಿಸಲಾಗಿದೆ.

ವಿಮಾನಯಾನ ಸಂಂಬಂಧಿಸಿದ ಪದವಿ ಮತ್ತು ಡಿಪ್ಲೋಮಾ ಕೋರ್ಸ್‌ ಗಳ ಮತ್ತು ಅದು ತೆರೆದಿಡುವ ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ಪಡೆಯಲು ಈ ವೆಬಿನಾರ್‌ ಸಹಕಾರಿಯಾಗಲಿದೆ.

ಸಂಸ್ಥೆಯ ನುರಿತ ಹಿರಿಯ ಅಧಿಕಾರಿಗಳು ದೇಶ ವಿದೇಶದ ವಿಮಾನಯಾನ ಸಂಸ್ಥೆಗಳಲ್ಲಿ ಶೇಕಡಾ 100ರಷ್ಟು ಉದ್ಯೋಗವಕಾಶದ ಭರವಸೆಯೊಂದಿಗೆ ವಿಮಾನಯಾನ ಸಂಬಂಧಿತ ಪದವಿ ಮತ್ತು ಡಿಪ್ಲೋಮಾ ಕೋರ್ಸ್‌ಗಳನ್ನು ಪಡೆಯಲಿಚ್ಚಿಸುವ ಆಸಕ್ತ ವಿದ್ಯಾರ್ಥಿಗಳಿಗೆ ಕ್ಯಾಬಿನ್ ಕ್ರ್ಯೂ‌, ಮ್ಯಾನೇಜ್‌ ಮೆಂಟ್‌, ಗ್ರೌಂಡ್‌ ಹ್ಯಾಂಡ್ಲಿಂಗ್‌ ಸೇರಿದಂತೆ ಸಂಸ್ಥೆಯಲ್ಲಿ ಲಭ್ಯವಿರುವ ಇನ್ನಷ್ಟು ಕೋರ್ಸ್‌ ಗಳ ಮಾಹಿತಿಯನ್ನು ಈ ಉಚಿತ ವೆಬಿನಾರ್‌ ನಲ್ಲಿ ನೀಡಲಿದ್ದಾರೆ.

ಆಕಾಶದೆತ್ತರಕ್ಕೆ ಹಾರುವ ನಿಮ್ಮ ಕನಸಿಗೆ ರೆಕ್ಕೆ ಕಟ್ಟಿಕೊಟ್ಟು ನನಸಾಗಿಸಲು ಉತ್ಸುಕವಾಗಿರುವ ಶ್ರೀ ಪ್ರಗತಿ ವಿಸ್ತಾರ ಏವಿಯೇಷನ್‌ ಅ.24ರಂದು ಅಪರಾಹ್ನ 3 ಗಂಟೆಗೆ ಗೂಗಲ್‌ ಮೀಟ್‌ ನಲ್ಲಿ ಈ ವೆಬಿನಾರ್‌ ಆಯೋಜಿಸಿದ್ದು ಆಸಕ್ತ ವಿದ್ಯಾರ್ಥಿಗಳು 9148516884 ನಂಬರ್‌ ಸಂಪರ್ಕಿಸುವ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಅಥವಾ ನೇರವಾಗಿ https://forms.gle/M7PJF3EEgpwM4cr97 ಈ ಲಿಂಕ್‌ ಮೂಲಕ ನೋಂದಾಯಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here