ಅಕ್ಷಯ ಕಾಲೇಜಿನಲ್ಲಿ  “ಸೈಬರ್ ಸೆಕ್ಯುರಿಟಿ” ಕಾರ್ಯಾಗಾರ  

0

ಪುತ್ತೂರು : ಅಕ್ಷಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ  ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಬಿ . ಸಿ. ಎ ವಿಭಾಗ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಹಾಗೂ ನಿಯೋ ಇನ್ನೋವೇಶನ್   ಸ್ಕಿಲ್ಸ್  ಸಂಸ್ಥೆಯ ಸಹಭಾಗಿತ್ವದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್  ಮತ್ತು ಸೈಬರ್‌ ಸೆಕ್ಯುರಿಟಿ  ಎಂಬ  ವಿಷಯಗಳಲ್ಲಿ  ಕಾರ್ಯಾಗಾರ  ನಡೆಯಿತು.  

ಇನ್ನೋವೇಶನ್   ಸ್ಕಿಲ್ಸ್  ಸಂಸ್ಥೆಯ ವಸುಮತಿ  ಮಾಹಿತಿ  ಕಾರ್ಯಾಗಾರದಲ್ಲಿ,  ಸೈಬರ್ ಸೆಕ್ಯುರಿಟಿ ಎನ್ನುವುದು ಡಿಜಿಟಲ್ ದಾಳಿಯಿಂದ ಸಿಸ್ಟಮ್‌ಗಳು, ನೆಟ್‌ವರ್ಕ್‌ಗಳು ಮತ್ತು ಪ್ರೋಗ್ರಾಂಗಳನ್ನು ರಕ್ಷಿಸಲು ಪರಿಣಾಮಕಾರಿ ಸೈಬರ್‌ ಸುರಕ್ಷತಾ ಕ್ರಮಗಳನ್ನು ಕಾರ್ಯಗತಗೊಳಿಸುವುದಾಗಿದೆ .ಪ್ರಬಲವಾದ ಪಾಸ್‌ವರ್ಡ್‌ಗಳನ್ನು ಆಯ್ಕೆಮಾಡುವುದು, ಇಮೇಲ್‌ನಲ್ಲಿ ಲಗತ್ತುಗಳ ಬಗ್ಗೆ ಎಚ್ಚರದಿಂದಿರುವುದು ಮತ್ತು ಡೇಟಾವನ್ನು ಬ್ಯಾಕಪ್ ಮಾಡುವುದು ಮುಂತಾದ ಮೂಲಭೂತ ಡೇಟಾ ಭದ್ರತಾ ತತ್ವಗಳ ಬಗ್ಗೆ  ವಿದ್ಯಾರ್ಥಿಗಳಿಗೆ  ಮಾಹಿತಿ ನೀಡಿದರು.

 ಬಿ. ಸಿ. ಎ ವಿಭಾಗದ ವಿದ್ಯಾರ್ಥಿಗಳು, ಉಪನ್ಯಾಸಕರು  ಕಾರ್ಯಾಗಾರದಲ್ಲಿ  ಪಾಲ್ಗೊಂಡರು.

LEAVE A REPLY

Please enter your comment!
Please enter your name here