ರಾಷ್ಟ್ರಮಟ್ಟದಲ್ಲಿ ಖೋ-ಖೋ ತಂಡ ದ್ವಿತೀಯ-ವಿವೇಕಾನಂದ ಪ.ಪೂ ಕಾಲೇಜಿನ ತಂಡಕ್ಕೆ ಪುತ್ತೂರು ಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ನಿಂದ ಅಭಿನಂದನೆ

0

ಪುತ್ತೂರು:ಅ.15 ರಿಂದ 18 ರವರೆಗೆ ಹರಿಯಾಣದ ಗೀತಾ ವಿದ್ಯಾಮಂದಿರ ಗೋಹನ ಸೋನಿಪಥ್ ನಲ್ಲಿ ನಡೆದ ಅಂಡರ್-19 ವಿದ್ಯಾಭಾರತೀಯ ರಾಷ್ಟ್ರೀಯ ಖೋ-ಖೋ ಪಂದ್ಯಕೂಟದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ತಂಡವು ಪುತ್ತೂರಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ತರಬೇತಿದಾರರಿಗೆ ಮತ್ತು ವ್ಯವಸ್ಥಾಪಕರ ಸಾಧನೆಯನ್ನು ಮೆಚ್ಚಿ ಪುತ್ತೂರಿನ ಪ್ರತಿಷ್ಠಿತ ಖೋ-ಖೋ ಕ್ಲಬ್ ಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ಮತ್ತು ಸದಸ್ಯರಾದ ಗುರುಪ್ರಸಾದ್, ಪವನ್, ಭರತ್, ಮತ್ತು ಡಾ. ಜ್ಯೋತಿ ಕುಮಾರಿ ಇವರು ಪುತ್ತೂರಿನ ರೈಲ್ವೆ ಸ್ಟೇಷನ್ ನಲ್ಲಿ ತಂಡವನ್ನು ಸ್ವಾಗತಿಸಿ ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here