ಬುರೂಜ್ ಶಾಲೆ: ಪ್ರಥಮ ಚಿಕಿತ್ಸೆ ಮತ್ತು ಮೂಲ ಸಹಾಯ ಬೆಂಬಲ ಕಾರ್ಯಾಗಾರ

0

ರಝಾನಗರ: ಮುಸ್ಲಿಂ ಎಜುಕೇಷನ್ ಇನ್ಸ್ಟಿಟ್ಯೂಟ್ ಫೆಡರೇಶನ್ ,ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಹಾಗೂ ಇಂಡಿಯಾನ ಹಾಸ್ಪಿಟಲ್ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್ ಇದರ ಸಹಯೋಗದಲ್ಲಿ ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಇಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಮೂಲ ಸಹಾಯ ಬೆಂಬಲ ತರಬೇತಿ ಕಾರ್ಯಾಗಾರ ನಡೆಯಿತು.

ವೇದಿಕೆಯಲ್ಲಿ ಇದ್ದ ಗಣ್ಯರು ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಡಾ.ಕೇದರ್ನಾದ್ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿ ವಿಧಾನ ತಿಳಿಸಿದರು. ಡಾ.ಮುಝಮ್ಮಿಲ್ ಯಾವುದೇ ಸಂದರ್ಭದಲ್ಲಿ ಏನಾದರೂ ಆದರೆ ಯಾವೆಲ್ಲ ವಿಧಾನದಿಂದ ದೇಹವನ್ನು ಹೇಗೆ ಸಂರಕ್ಷಿಸಿಕೊಳ್ಳಬೇಕೆಂದು ತರಬೇತಿ ನೀಡಿದರು. ಬಳಿಕ ಮೂಲ ದಾಖಲೆಗಳ ಮಾಹಿತಿಯನ್ನು ಅರ್ಜಿ ಬರಹಗಾರ, ಸಾಮಾಜಿಕ ಕಾರ್ಯಕರ್ತ ಆಶಿಕ್ ಕುಕ್ಕಾಜೆ ನೀಡಿದರು. ಈ ಸಂದರ್ಭದಲ್ಲಿ ಇಂಡಿಯಾನ ಹಾಸ್ಪಿಟಲ್ ಎಮರ್ಜೆನ್ಸಿ ಮೆಡಿಸಿನ್ ನ MD -HOD ಆದ ಡಾ.ಸಲ್ಪಿ ಪಿ ಕೆ, ಬುರೂಜ್ ಶಾಲಾ ಸಂಚಾಲಕ ಶೇಖ್ ರಹ್ಮತ್ತುಲ್ಲಾಹ್ ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಬಿ ಸಾಲ್ಯಾನ್ ಉಪಸ್ಥಿತರಿದ್ದರು. ಪೋಷಕರು , ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು. ಶೇಖ್ ಜಲಾಲುದ್ದೀನ್ ಸ್ವಾಗತಿಸಿದರು. ಎಲ್ಸಿ ಲಸ್ರಾದೋ ಧನ್ಯವಾದ ಅರ್ಪಿಸಿದರು. ಎಸ್.ಪಿ ರಝೀಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here